AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನ ಕಲಾವಿದನ ಕೈ ಚಳಕದಲ್ಲಿ ಮೂಡಿದ ಚಂದ್ರಯಾನ 3 ಗಣಪ

ಮೈಸೂರಿನ ಕಲಾವಿದನ ಕೈ ಚಳಕದಲ್ಲಿ ಮೂಡಿದ ಚಂದ್ರಯಾನ 3 ಗಣಪ

ರಾಮ್​, ಮೈಸೂರು
| Updated By: ವಿವೇಕ ಬಿರಾದಾರ

Updated on: Sep 18, 2023 | 10:13 AM

ನಾಡಿನೆಲ್ಲೆಡೆ ಗಣಪತಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ವಿವಿಧ ಊರುಗಳಲ್ಲಿ ವಿವಿಧ ರೂಪಗಳಲ್ಲಿ ವಿಘ್ನನಿವಾರಕ ರಾರಾಜಿಸುತ್ತಿದ್ದಾನೆ. ಕಾಂತಾರಾ ಗಣಪ ಹೀಗೆ ಹಲವು ರೂಪದಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸಲಾಗಿದೆ. ಇದೇರೀತಿಯಾಗಿ ಮೈಸೂರಿನ ಕಲಾವಿದನ ಕೈ ಚಳಕದಲ್ಲಿ ಚಂದ್ರಯಾನ ಗಣಪ ಮೂಡಿದ್ದಾನೆ.

ಮೈಸೂರು ಸೆ.18: ನಾಡಿನೆಲ್ಲೆಡೆ ಗಣಪತಿ ಹಬ್ಬದ (Ganesh Chaturthi) ಸಡಗರ ಸಂಭ್ರಮ ಮನೆ ಮಾಡಿದೆ. ವಿವಿಧ ಊರುಗಳಲ್ಲಿ ವಿವಿಧ ರೂಪಗಳಲ್ಲಿ ವಿಘ್ನನಿವಾರಕ ರಾರಾಜಿಸುತ್ತಿದ್ದಾನೆ. ಕಾಂತಾರಾ (Kantara) ಗಣಪ ಹೀಗೆ ಹಲವು ರೂಪದಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸಲಾಗಿದೆ. ಇದೇರೀತಿಯಾಗಿ ಮೈಸೂರಿನ (Mysore) ಕಲಾವಿದನ ಕೈ ಚಳಕದಲ್ಲಿ ಚಂದ್ರಯಾನ 3 (Chandrayaan 3) ಗಣಪ ಮೂಡಿದ್ದಾನೆ. ಹೌದು ಕುಂಬಾರಗೇರಿ ಕಲಾವಿದ ಯಶವಂತ ಅವರು ತ್ರಿವರ್ಣ ಧ್ವಜ ಹಿಡಿದು ಭೂಮಂಡಲದ ಮೇಲೆ ಗಣಪ ಕುಳಿತಿದ್ದಾನೆ. ಪಕ್ಕದಲ್ಲೇ ಚಂದ್ರಯಾನ 3ರ ರಾಕೆಟ್, ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಮತ್ತು ಗಣೇಶನ ವಾಹನ ಮೂಷಿಕ ಚಂದ್ರ ಗ್ರಹದಲ್ಲಿ ಇಳಿದ ವಿಗ್ರಹಗಳನ್ನು ಯಶವಂತ ತಯಾರಿಸಿದ್ದಾರೆ.