AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಿಂದ ಬಾಬು ಪೂಜಾರಿ ವಿರುದ್ಧವೇ ಜಾರಿ ನಿರ್ದೇಶಾನಲಯಕ್ಕೆ ಪತ್ರ ಬರೆದಿದ್ದ ಚೈತ್ರಾ ಕುಂದಾಪುರ

ಗೋವಿಂದ ಬಾಬು ಪೂಜಾರಿ ವಿರುದ್ಧವೇ ಜಾರಿ ನಿರ್ದೇಶಾನಲಯಕ್ಕೆ ಪತ್ರ ಬರೆದಿದ್ದ ಚೈತ್ರಾ ಕುಂದಾಪುರ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 18, 2023 | 11:19 AM

ವಂಚನೆ ಆರೋಪ ಎದುರಿಸುತ್ತಿರುವ ಚೈತ್ರಾ ಗೋವಿಂದ ವಿರುದ್ಧವೇ ಜಾರಿ ನಿರ್ದೇಶಾನಲಯಕ್ಕೆ ಪತ್ರ ಬರೆದಿದ್ದು ಅದರ ಪ್ರತಿ ಟಿವಿ9 ಕನ್ನಡ ವಾಹಿನಿಗೆ ಲಭ್ಯವಾಗಿದೆ. ಗೋವಿಂದ ಪೂಜಾರಿಯ ಬಗ್ಗೆ ಒಂದಷ್ಟು ವಿವರಣೆ ನೀಡಿ, ಅವರು ರೂ. 6 ಕೋಟಿ ರೂ. ಅಕ್ರಮವಾಗಿ ವರ್ಗಾಯಿರುವರೆಂದು ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಹಾಲಾಶ್ರೀ ಅಭಿನವ ಸ್ವಾಮೀಜಿಗೆ 1.5 ಕೋಟಿ ರೂ. ಸಂದಾಯವಾಗಿರುವ ಕುರಿತು ಸಹ ಮಾಹಿತಿ ನೀಡಿದ್ದಾಳೆ.

ಬೆಂಗಳೂರು: ಬಗೆದಷ್ಟು ಹೆಚ್ಚುತ್ತಿದೆ ಚೈತ್ರಾ ಕುಂದಾಪುರ (Chaitra Kundapura) ವಂಚನೆ ಪ್ರಕರಣದ ಆಳ. ಮೊನ್ನೆ ನಗರದ ಸಿಸಿಬಿ ಅಧಿಕಾರಿಗಳು (CCB Sleuths) ವಿಚಾರಣೆ ನಡೆಸುತ್ತಿದ್ದಾಗ ಅಸ್ವಸ್ಥಳಾದವಳ ಹಾಗೆ ನಟಿಸಿ ಆಸ್ಪತ್ರೆ ಸೇರಿದ್ದ ಚೈತ್ರಾಳನ್ನು ಪೊಲೀಸರು ಸ್ಟೇಷನ್ ಗೆ ಕರೆತಂದಿದ್ದಾರೆ. ಬಂಧನವಾದ ದಿನ ನಿರ್ಭೀತಿಯಿಂದ ತಲೆಯೆತ್ತಿಕೊಂಡು ಸಿಸಿಬಿ ಆವರಣದಲ್ಲಿ ಪಾಸಿಂಗ್ ಹೇಳಿಕೆಯನ್ನು ಆತ್ಮವಿಶ್ವಾಸದಿಂದ ನೀಡಿದ್ದ ಚೈತ್ರಾ ಈಗ ತಲೆ ಮೇಲೆ ಮುಸುಕು ಹಾಕಿಕೊಂಡು ಮುಖ ಮುಚ್ಚಿಕೊಳ್ಳುತ್ತಿದ್ದಾಳೆ. ಏತನ್ಮಧ್ಯೆ, ಆನಾಹುತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ವಿಧಾನ ಸಭಾ ಚುನಾವಣೆಯಲ್ಲಿ ಬೈಂದೂರಿನಿಂದ ಬಿಜೆಪಿ ಟಿಕೆಟ್ ಕೊಡಿಸುವ ಭರವಸೆ ನೀಡಿ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Pujari) 5 ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಚೈತ್ರಾ ಗೋವಿಂದ ವಿರುದ್ಧವೇ ಜಾರಿ ನಿರ್ದೇಶಾನಲಯಕ್ಕೆ (Enforcement Directorate) ಪತ್ರ ಬರೆದಿದ್ದು ಅದರ ಪ್ರತಿ ಟಿವಿ9 ಕನ್ನಡ ವಾಹಿನಿಗೆ ಲಭ್ಯವಾಗಿದೆ. ಗೋವಿಂದ ಪೂಜಾರಿಯ ಬಗ್ಗೆ ಒಂದಷ್ಟು ವಿವರಣೆ ನೀಡಿ, ಅವರು ರೂ. 6 ಕೋಟಿ ರೂ. ಅಕ್ರಮವಾಗಿ ವರ್ಗಾಯಿರುವರೆಂದು ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಹಾಲಾಶ್ರೀ ಅಭಿನವ ಸ್ವಾಮೀಜಿಗೆ 1.5 ಕೋಟಿ ರೂ. ಸಂದಾಯವಾಗಿರುವ ಕುರಿತು ಸಹ ಮಾಹಿತಿ ನೀಡಿದ್ದಾಳೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ