ಟೈಟ್ ಆಗಿ ಪಬ್‌ನಲ್ಲಿ ಗಲಾಟೆ ಮಾಡಿದ್ದ ಇನ್ಸ್‌ಪೆಕ್ಟರ್ ಅಮಾನತು
ಮೈಸೂರಿನ ಸಿಸಿಬಿ ಇನ್ಸ್‌ಪೆಕ್ಟರ್ ಮೋಹನ್ ಕುಮಾರ್ ಅವರು ಪಬ್‌ನಲ್ಲಿ ಮದ್ಯಪಾನ ಮಾಡಿ ಗಲಾಟೆ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಹಾಡು ಹಾಕಿಸುವಂತೆ ಒತ್ತಾಯಿಸಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಅವರನ್ನು ಅಮಾನತುಗೊಳಿಸಿದ್ದಾರೆ. ಇನ್ಸ್‌ಪೆಕ್ಟರ್‌ನ ಈ ನಡವಳಿಕೆ ತೀವ್ರ ಟೀಕೆಗೆ ಒಳಗಾಗಿದೆ.
ಮೈಸೂರು, ಆಗಸ್ಟ್ 18: ಮದ್ಯ ಸೇವಿಸಿ ಪಬ್‌ನಲ್ಲಿ ಗಾಲಾಟೆ ಮಾಡಿದ್ದ ಮೈಸೂರು ಸಿಸಿಬಿ ಇನ್ಸ್‌ಪೆಕ್ಟರ್ ಮೋಹನ್ ಕುಮಾರ್ ಅವರನ್ನು ಅಮಾನತು ಮಾಡಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನ ಜೆ.ಸಿ.ನಗರದ ಪಬ್‌ನಲ್ಲಿ ಕುಡಿದು ಟೈಟ್ ಆಗಿ ಪುನೀತ್ ಹಾಡು ಹಾಕುವಂತೆ ಗಲಾಟೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ಪಬ್ ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ. ಇನ್ಸ್‌ಪೆಕ್ಟರ್ ಮೋಹನ್ ಕುಮಾರ್ ಗಲಾಟೆ ಮಾಡಿದ ವಿಡಿಯೋ ವೈರಲ್ ಆಗಿತ್ತು.
Published on: Aug 18, 2025 10:22 PM
