ಮೈಸೂರು ದಸರಾ 2024: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ

| Updated By: ವಿವೇಕ ಬಿರಾದಾರ

Updated on: Oct 15, 2024 | 1:33 PM

ವಿಶ್ವವಿಖ್ಯಾತ ಮೈಸೂರು ದಸರಾ ಸಂಪನ್ನಗೊಂಡಿದೆ. ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಕಲಾ ತಂಡಗಳು ಕೂಡ ತಮ್ಮ ತಮ್ಮ ಊರು ಸೇರಿವೆ. ಇತ್ತ, ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಕಲಾ ತಂಡಗಳಿ ಬಹುಮಾನ ಘೋಷಣೆಯಾಗಿದೆ. ವಿಜಯಪುರ ಜಿಲ್ಲೆಯ ಕಲಾ ತಂಡಕ್ಕೆ ಮೊದಲ ಬಹುಮಾನ ಬಂದಿದೆ.

ಮೈಸೂರು, ಅಕ್ಟೋಬರ್​ 15: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಸಂಪನ್ನಗೊಂಡಿದೆ. ದಸರಾ ಮುಗಿಸಿದ ಕ್ಯಾಪ್ಟನ್​ ಅಭಿಮನ್ಯು ನೇತೃತ್ವದ ಗಜಪಡೆ ನಾಡಿನಿಂದ ಕಾಡಿಗೆ ತೆರಳಿವೆ. ಜಂಬೂಸವಾರಿಯಲ್ಲಿ (Jambu Savari) ಭಾಗಿಯಾಗಿದ್ದ ಕಲಾ ತಂಡಗಳು ಕೂಡ ತಮ್ಮ ತಮ್ಮ ಊರು ಸೇರಿವೆ. ಇತ್ತ, ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಕಲಾ ತಂಡಗಳಿ ಬಹುಮಾನ ಘೋಷಣೆಯಾಗಿದ್ದು, ವಿಜಯಪುರ ಜಿಲ್ಲೆಯ ಸತ್ತಿಗೆ ಕುಣಿತ (Sattige Kunita) ಕಲಾ ತಂಡಕ್ಕೆ ಮೊದಲ ಬಹುಮಾನ ಬಂದಿದೆ.

ಮೊದಲ ಬಹುಮಾನ ರೂಪದಲ್ಲಿ ಸತ್ತಿಗೆ ಕುಣಿತ ಕಲಾ ತಂಡಕ್ಕೆ 15 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ದ್ವಿತೀಯ ಬಹುಮಾನ ಯಾದಗಿರಿ ಮತ್ತು ಮಂಡ್ಯ ಜಿಲ್ಲೆ ಹಾಗೂ ಮದ್ದೂರು ತಾಲೂಕಿನ ಕಲಾ ತಂಡಕ್ಕೆ ಬಂದಿದೆ. ದ್ವಿತೀಯ ಬಹುಮಾನ ರೂಪದಲ್ಲಿ ತಲಾ 5 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ.

ತೃತೀಯ ಬಹುಮಾನ ಹಾವೇರಿ ಹಾಗೂ ಕೋಲಾರ ಜಿಲ್ಲೆಯ ಕಲಾ ತಂಡಗಳಿಗೆ ಒಲಿದಿದೆ. ಬಹುಮಾನ ರೂಪದಲ್ಲಿ ಲಾ 2500 ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ