ಮೈಸೂರು: ನಾಲೆಗೆ ಕಾರು ಉರುಳಿ ಬಿದ್ದು ವಕೀಲರು ನಾಪತ್ತೆ ಪ್ರಕರಣ; ವಕೀಲರಿಗಾಗಿ ಮುಂದುವರಿದ ಹುಡುಕಾಟ
ಚಿಕ್ಕದೇವಮ್ಮ ದೇವಸ್ಥಾನದ ಬೆಟ್ಟದಿಂದ ಕಬಿನಿ ಜಲಾಶಯಕ್ಕೆ ವಕೀಲರು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಕಬಿನಿ ಬಲದಂಡೆ ನಾಲೆಗೆ ಕಾರು ಉರುಳಿ ಬಿದ್ದಿತ್ತು.
ಮೈಸೂರು: ಕಬಿನಿ ಬಲದಂಡೆ ನಾಲೆಗೆ ಕಾರು ಬಿದ್ದು ಇಬ್ಬರು ವಕೀಲರು (advocates) ನಾಪತ್ತೆ ಪ್ರಕರಣ ಸಂಬಂಧ ನಾಪತ್ತೆಯಾದ ವಕೀಲರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಜಿಲ್ಲೆಯ ಸರಗೂರು ತಾಲ್ಲೂಕಿನ ಸಾಗರೆ ಗ್ರಾಮದ ಬಳಿ ನಿನ್ನೆ ಸಂಜೆ ಘಟನೆ ನಡೆದಿದೆ. ಹುಣಸೂರಿನ ವಕೀಲರಾದ ಅಶೋಕ್, ದಿನೇಶ್, ಗಿರೀಶ್ ಕಾರಿನಲ್ಲಿದ್ದ ವಕೀಲರು. ಚಿಕ್ಕದೇವಮ್ಮ ದೇವಸ್ಥಾನದ ಬೆಟ್ಟದಿಂದ ಕಬಿನಿ ಜಲಾಶಯಕ್ಕೆ ವಕೀಲರು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಕಬಿನಿ ಬಲದಂಡೆ ನಾಲೆಗೆ ಕಾರು ಉರುಳಿ ಬಿದ್ದಿತ್ತು. ಈ ವೇಳೆ ವಕೀಲ ಅಶೋಕ್ ಈಜಿ ದಡ ಸೇರಿದ್ದರು. ಕಾರಿನಲ್ಲಿದ್ದ ದಿನೇಶ್ ಮತ್ತು ಗಿರೀಶ್ ನಾಪತ್ತೆಯಾಗಿದ್ದಾರೆ. ಅಶೋಕ್ ಪಾರಾಗಿದ್ದ ದೃಶ್ಯ ಹಾಗೂ ಇಬ್ಬರು ನೀರಿನಲ್ಲಿ ಮುಳುಗುತ್ತಿರುವ ದೃಶ್ಯವನ್ನು ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳೀಯರ ನೆರವಿನಿಂದ ಕಾರನ್ನು ಪೊಲೀಸರು ಮೇಲೆತ್ತಿದ್ದು, ನಾಪತ್ತೆಯಾದ ವಕೀಲರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ; ಮೈಸೂರು: ಕಬಿನಿ ಬಲದಂಡೆ ನಾಲೆಗೆ ಉರುಳಿದ ಕಾರು -ಇಬ್ಬರು ವಕೀಲರು ಜಲಸಮಾಧಿ, ಈಜಿ ದಡ ಸೇರಿದ ಒಬ್ಬ ವಕೀಲ