ಮೈಸೂರು: ಕಬಿನಿ ಬಲದಂಡೆ ನಾಲೆಗೆ ಉರುಳಿದ ಕಾರು -ಇಬ್ಬರು ವಕೀಲರು ಜಲಸಮಾಧಿ, ಈಜಿ ದಡ ಸೇರಿದ ಒಬ್ಬ ವಕೀಲ
ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಸಾಗರೆ ಗ್ರಾಮದ ಬಳಿ ಕಬಿನಿ ನಾಲೆಗೆ ಕಾರು ಉರುಳಿ ಬಿದ್ದು, ಇಬ್ಬರು ವಕೀಲರು ಜಲಸಮಾಧಿಯಾಗಿದ್ದಾರೆ.
ಮೈಸೂರು: ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಸಾಗರೆ ಗ್ರಾಮದ ಬಳಿ ಕಬಿನಿ ಬಲದಂಡೆ ನಾಲೆಗೆ (kabini canal) ಕಾರು ಉರುಳಿ ಬಿದ್ದು, ಇಬ್ಬರು ವಕೀಲರು (advocates) ಜಲಸಮಾಧಿಯಾಗಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ವಕೀಲರು ಈಜಿಕೊಂಡು ಸುರಕ್ಷಿತವಾಗಿ ದಡ ಸೇರಿದ್ದಾರೆ (car mishap).
ಚಿಕ್ಕದೇವಮ್ಮ ದೇವಸ್ಥಾನದ ಬೆಟ್ಟದಿಂದ ಕಬಿನಿ ಜಲಾಶಯಕ್ಕೆ ಹೋಗುತ್ತಿದ್ದಾಗ ಅವಘಡ… ಹುಣಸೂರಿನ ವಕೀಲರಾದ ಅಶೋಕ್, ದಿನೇಶ್, ಶಂಕರ್ ಕಾರಿನಲ್ಲಿದ್ದ ವಕೀಲರು. ಇವರು ಚಿಕ್ಕದೇವಮ್ಮ ದೇವಸ್ಥಾನದ ಬೆಟ್ಟದಿಂದ ಕಬಿನಿ ಜಲಾಶಯಕ್ಕೆ ಹೋಗುತ್ತಿದ್ದರು. ಕಾರು ನಿಯಂತ್ರಣ ತಪ್ಪಿ ಕಬಿನಿ ಬಲದಂಡೆ ನಾಲೆಗೆ ಉರುಳಿ ಬಿದ್ದಿದೆ. ಈ ವೇಳೆ ವಕೀಲ ಅಶೋಕ್ ಈಜಿ ದಡ ಸೇರಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ದಿನೇಶ್ ಮತ್ತು ಶಂಕರ್ ಸಾವನ್ನಪ್ಪಿದ್ದಾರೆ. ಸ್ಥಳೀಯರ ನೆರವಿನಿಂದ ಕಾರು ಮತ್ತು ಮೃತದೇಹಗಳನ್ನು ಪೊಲೀಸರು ಮೇಲೆತ್ತಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 9:05 pm, Fri, 29 July 22