ಮೈಸೂರು: ಚಾಮುಂಡಿ ಬೆಟ್ಟದಿಂದ ಏಕಾಏಕಿ ರಸ್ತೆಗೆ ಉರುಳಿದ ಕಲ್ಲುಬಂಡೆಗಳು, ಸ್ವಲ್ಪದರಲ್ಲೇ ತಪ್ಪಿದ ಅನಾಹುತ
ಭಾರಿ ಮಳೆಯ ಕಾರಣ ಮಣ್ಣು ಸಡಿಲಗೊಂಡು ಮೈಸೂರಿನ ಚಾಮುಂಡಿ ಬೆಟ್ಟ ರಸ್ತೆಯಲ್ಲಿ ಕಲ್ಲುಬಂಡೆಗಳು ರಸ್ತೆಗೆ ಉರುಳಿವೆ. ಇದೇ ವೇಳೆ ಬಸ್ಸೊಂದು ಕೂಡ ಸಂಚರಿಸುತ್ತಿತ್ತು. ಅದೃಷ್ಟವಶಾತ್, ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ವಿಡಿಯೋ ಇಲ್ಲಿದೆ ನೋಡಿ.
ಮೈಸೂರು, ಡಿಸೆಂಬರ್ 3: ಫೆಂಗಲ್ ಚಂಡಮಾರುತದ ಪರಿಣಾಮ ಮೈಸೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯ ಪರಿಣಾಮವಾಗಿ ಚಾಮುಂಡಿ ಬೆಟ್ಟದಲ್ಲಿ ಕಲ್ಲು ಬಂಡೆಗಳು ರಸ್ತೆಗೆ ಜಾರಿಬಿದ್ದಿವೆ. ರಸ್ತೆಗುರುಳಿದ ಬಂಡೆಗಳಿಂದ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಗಿದೆ. ಅದೃಷ್ಟವಶಾತ್, ಯಾವುದೇ ಹಾನಿ ಸಂಭವಿಸಿಲ್ಲ. ಘಟನೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿರಂತರ ಮಳೆಯಿಂದ ಮೈಸೂರಿನಲ್ಲಿ ಅಪಾರ ಪ್ರಮಾಣದ ಬೆಳೆ ನಾಶವೂ ಆಗಿದೆ. ಕಾಳೇನ ಹಳ್ಳಿ ಗ್ರಾಮದಲ್ಲಿ ಕಟಾವು ಮಾಡಿದ್ದ ಭತ್ತ ನೀರು ಪಾಲಾಗಿದೆ. ಭತ್ತದ ಗದ್ದೆಗಳು ಕೆರೆಯಂತಾಗಿವೆ. ಭತ್ತದ ಗದ್ದೆಯಿಂದ ನೀರು ಹೊರ ಹಾಕಲು ರೈತ ಮಹಿಳೆಯರು ಹರಸಾಹಸಪಟ್ಟರು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಪರಿಣಾಮವಾಗಿ ಅನ್ನದಾತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ