ಫೆಂಗಲ್ ಎಫೆಕ್ಟ್: ನೆಲಮಂಗಲದಲ್ಲಿ ನಿರಂತರ ಮಳೆ ಜನಜೀವನ ಅಸ್ತವ್ಯಸ್ತ, ಶಾಲಾಮಕ್ಕಳಿಗೆ ತೊಂದರೆ
ಬೆಂಗಳೂರು ಮತ್ತು ನೆಲಮಂಗಲದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ ಹಾಗಾಗಿ ಮಕ್ಕಳು ನೆನೆಯುತ್ತಾ, ಚಳಿಯಲ್ಲಿ ನಡುಗುತ್ತ ಶಾಲೆಗಳಲ್ಲಿ ಹೋದರು. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ನಾಳೆ ಸಾಯಂಕಾಲದವರೆಗೆ ಫೆಂಗಲ್ ಚಂಡಮಾರುತ ತನ್ನ ಅಟ್ಟಹಾಸ ಮೆರೆಯಲಿದೆ.
ನೆಲಮಂಗಲ: ನಿಧಾನತಿಯಲ್ಲಿ ಚಲಿಸುತ್ತಿರುವ ವಾಹನಗಳು, ಮೈಮೇಲೆ ಜರ್ಕಿನ್ ಎಳೆದುಕೊಂಡು ತಮ್ಮ ತಮ್ಮ ಕಚೇರಿಗಳನ್ನು ತಲುಪುವ ಧಾವಂತದಲ್ಲಿರುವ ದ್ವಿಚಕ್ರವಾಹನ ಸವಾರರು, ರಸ್ತೆಗಳ ಮೇಲೆ ಕೊಡೆಗಳನ್ನು ಬಿಚ್ಚಿಕೊಂಡು ಓಡಾಡುತ್ತಿರುವ ಜನ, ಮಳೆ ಹೆಚ್ಚಾದಾಗ ಫ್ಲೈಓವರ್, ಶಾಪು, ಹೋಟೆಲ್, ಬಸ್ ಸ್ಟಾಪು ಮತ್ತು ದೊಡ್ಡ ದೊಡ್ಡ ಮರಗಳ ಕೆಳಗೆ ಆಶ್ರಯ ಪಡೆಯುತ್ತಿರುವ ಕೊಡೆಯಿಲ್ಲದವರು-ಬೆಂಗಳೂರು ಹೊರವಲಯದ ನೆಲಮಂಗಲ ಮತ್ತು ಬೆಂಗಳೂರು ನಗರದಲ್ಲಿ ಕಾಣುತ್ತಿರುವ ಸಾಮಾನ್ಯ ದೃಶ್ಯಗಳಿವು. ಫೆಂಗಲ್ ಎಫೆಕ್ಟ್ ಜನರನ್ನು ಇವತ್ತು ಸಹ ಕಾಡುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಫೆಂಗಲ್ ಚಂಡಮಾರುತ ಎಫೆಕ್ಟ್: ವರ್ಷದಲ್ಲೇ ಎರಡೆರಡು ಬಾರಿ ತುಂಬಿದ ಸುವರ್ಣಾವತಿ ಡ್ಯಾಂ
Latest Videos