ಮೈಸೂರು: ರಸ್ತೆ ತಡಿಬೇಡಿ ಎಂದ ಮಹಿಳೆಗೆ ಗದರಿದ ಸಿದ್ದು ಬೆಂಬಲಿಗರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 18, 2024 | 3:45 PM

ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ಹಿನ್ನೆಲೆ ಸಿಎಂ  ತವರು ಮೈಸೂರಲ್ಲಿ ಪ್ರತಭಟನೆಗಳು ಶುರುವಾಗಿದೆ. ಬಸ್​ಗಳನ್ನ ತಡೆದು ರಸ್ತೆ ಮಧ್ಯೆ ಬೆಂಬಲಿಗರು ಪ್ರತಿಭಟನೆ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಹಿಳೆಯೊಬ್ಬರು, ಸಿದ್ದು ಅಭಿಮಾನಿಗಳ ವಿರುದ್ದ ವಾಗ್ದಾಳಿ ನಡೆಸಿದರು. ಇದಕ್ಕೆ ಕೋಪಗೊಂಡ ಸಿದ್ದು ಬೆಂಬಲಿಗರು ಮಹಿಳೆಗೆ ಗದರಿದರು.

ಮೈಸೂರು, ಆ.18: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ಹಿನ್ನೆಲೆ ಸಿಎಂ  ತವರು ಮೈಸೂರಲ್ಲಿ ಪ್ರತಭಟನೆಗಳು ಶುರುವಾಗಿದೆ. ಬಸ್​ಗಳನ್ನ ತಡೆದು ರಸ್ತೆ ಮಧ್ಯೆ ಬೆಂಬಲಿಗರು ಪ್ರತಿಭಟನೆ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ತಡೆಯಲು ಬಂದರೂ ಪೊಲೀಸರ ಮೇಲೂ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರ ರಾಜಕೀಯ ಮಾಡ್ತಿದೆ ಅಂತ ಕಿಡಿಕಾರಿದರು. ಈ ವೇಳೆ ಮಹಿಳೆಯೊಬ್ಬರು, ಸಿದ್ದು ಅಭಿಮಾನಿಗಳ ವಿರುದ್ದ ವಾಗ್ದಾಳಿ ನಡೆಸಿ. ‘ಯಾಕೆ ಜನಗಳಿಗೆ ತೊಂದರೆ ಕೊಡುತ್ತೀರಾ ಎಂದು ಬೈದು, ಪ್ರತಿಭಟನಾನಿರತರಿಗೆ ಹಿಡಿಶಾಪ ಹಾಕಿದರು. ಇದರಿಂದ ಮಹಿಳೆಗೆ ಸಿದ್ದು ಬೆಂಬಲಿಗರು ಗದರಿದರು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ತಣ್ಣಗಾಗಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on