ಯದುವೀರ್ ಭೇಟಿಯ ಬಳಿಕ ಬೇಷರತ್ ಬೆಂಬಲ ವ್ಯಕ್ತಪಡಿಸಿದ ಮೈಸೂರು ಜಿಲ್ಲಾ ವಕೀಲರ ಸಂಘ
2004ರಲ್ಲಿ ತಾನು ಸಂಘದ ಖಜಾಂಚಿಯಾಗಿದ್ದಾಗ ಆಗ ಸಂಸದರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಕೀಲರ ಸಂಘಕ್ಕೆ ರೂ. 10 ಲಕ್ಷ ದೇಣಿಗೆ ನೀಡಿದನ್ನು ಮತ್ತು ಅದೇ ಹಣದಿಂದ ವಕೀಲರ ಸಂಘದ ಕಟ್ಟದ ನಿರ್ಮಿಸಿದ್ದನ್ನು ಹೇಳಿದ ಸಂಘದ ಅಧ್ಯಕ್ಷ ಎಂ ಮಹದೇವಸ್ವಾಮಿ, ಒಡೆಯರ್ ರಾಜಮನೆತನದದೊಂದಿಗೆ ವಕೀಲರ ಸಂಘದ ಅವಿನಾಭಾವ ಸಂಬಂಧವಿದೆ ಎಂದರು
ಮೈಸೂರು: ಕೊಡಗು-ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ ಒಡೆಯರ್ (Yaduveer Krishna Dutt Wodeyar) ರಾಜಕೀಯದ ಪಟ್ಟುಗಳನ್ನು ಅರ್ಥಮಾಡಿಕೊಂಡಂತಿದೆ. ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಹೈನೋಟ್ ನೊಂದಿಗೆ ಆರಂಭಿಸಿರುವ ಅವರು ಇಂದು ಮೈಸೂರು ವಕೀಲರ ಸಂಘಕ್ಕೆ (bar association) ಭೇಟಿ ನೀಡಿ ಜಿಲ್ಲಾ ನ್ಯಾಯವಾದಿಗಳ ಸಹಕಾರ ಕೋರಿದರು. ಅವರ ಭೇಟಿಯ ನಂತರ ಮೈಸೂರು ಟಿವಿ9 ವರದಿಗಾರರ ಸಂಘದ ಪದಾಧಿಕಾರಿಗಳ ಜೊತೆ ಮಾತಾಡಿದರು. 2004ರಲ್ಲಿ ತಾನು ಸಂಘದ ಖಜಾಂಚಿಯಾಗಿದ್ದಾಗ ಆಗ ಸಂಸದರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantha Dutt Narasimharaj Wodeyar) ವಕೀಲರ ಸಂಘಕ್ಕೆ ರೂ. 10 ಲಕ್ಷ ದೇಣಿಗೆ ನೀಡಿದನ್ನು ಮತ್ತು ಅದೇ ಹಣದಿಂದ ವಕೀಲರ ಸಂಘದ ಕಟ್ಟದ ನಿರ್ಮಿಸಿದ್ದನ್ನು ಹೇಳಿದ ಸಂಘದ ಅಧ್ಯಕ್ಷ ಎಂ ಮಹದೇವಸ್ವಾಮಿ, ಒಡೆಯರ್ ರಾಜಮನೆತನದದೊಂದಿಗೆ ವಕೀಲರ ಸಂಘದ ಅವಿನಾಭಾವ ಸಂಬಂಧವಿದೆ ಎಂದರು.
ವರದಿಗಾರನನೊಂದಿಗೆ ಮಾತಾಡಿದ ಸಂಘದ ಮತ್ತೊಬ್ಬ ಪದಾಧಿಕಾರಿ, ನಾಲ್ವಡಿ ಕೃಷ್ಣರಾಜ್ ಒಡೆಯರ್ ಕಾಲದಿಂದಲೂ ಮೈಸೂರನ್ನು ಅಭಿವೃದ್ಧಿಪಡಿಸಿದ್ದು ಆ ಸಂಸ್ಥಾನದ ಮಹಾರಾಜರೇ, ಮೈಸೂರು ಕೋರ್ಟ್ ಕಟ್ಟಡ ಮಹಾರಾಜರ ದೇಣಿಗೆಯಾಗಿದೆ, ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಮಹಾರಾಜರು ನೀಡಿರುವ ಕೊಡುಗೆ ಅಪಾರ, ಯದುವೀರ್ ರಾಜಮನೆತನದವರಾದರೂ ಒಬ್ಬನ ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ವಕೀಲರ ಸಂಘದ ಎಲ್ಲ ಸದಸ್ಯರು ಪಕ್ಷಭೇದ ಮರೆತು ಯದುವೀರ್ ಯಶಸ್ಸಿಗೆ ಸಹಕರಿಸಲಿದ್ದಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯದುವೀರ್ ಪರ ಪ್ರಚಾರ ಮಾಡುತ್ತಿದ್ದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಬಗ್ಗೆ ಹೇಳಿದ್ದು ಸರಿಯೆಂದರು!