ಸಿಕ್ಕ ಸಿಕ್ಕ ಗೋಡೆ ನೋಡಿ ಮೂತ್ರ ವಿಸರ್ಜನೆ ಮಾಡ್ತೀರಾ? ಹುಷಾರ್!

Edited By:

Updated on: May 06, 2026 | 7:21 PM

ಸಿಕ್ಕ ಸಿಕ್ಕ ಗೋಡೆ ಮೇಲೆ ಸೂಸು ಮಾಡೋರಿಗೆ ಬುದ್ದಿಕಲಿಸಲು ಮೈಸೂರಿನ ಸಬರ್ಬ್ ಬಸ್ ಸ್ಟ್ಯಾಂಡ್ ಬಳಿ ಈ ರೀತಿಯ ಮಿರರ್ ಅನ್ನು ಕಾಂಪೌಂಡ್ ಗೆ ಅಳವಡಿಸಲಾಗಿದೆ. ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಕಾಂಪೌಂಡ್ ಗೆ ಕನ್ನಡಿ ಮಾದರಿ ರಿಫ್ಲೆಕ್ಷನ್ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಖಾಲಿ ಕಾಂಪೌಂಡ್ ಗಳ ಮುಂದೆ ನಿಂತು ಮೂತ್ರ ವಿಸರ್ಜನೆ ಬ್ರೇಕ್‌ಗೆ ಹಾಕಲು ಪಾಲಿಕೆ ಈ ಹೊಸ ಐಡಿಯಾ ಮಾಡಿದೆ.

ಮೈಸೂರು, (ಮೇ 06): ಸಿಕ್ಕ ಸಿಕ್ಕ ಗೋಡೆ ಮೇಲೆ ಸೂಸು ಮಾಡೋರಿಗೆ ಬುದ್ದಿಕಲಿಸಲು ಮೈಸೂರಿನ (mysuru) ಸಬರ್ಬ್ ಬಸ್ ಸ್ಟ್ಯಾಂಡ್ ಬಳಿ ಈ ರೀತಿಯ ಮಿರರ್ ಅನ್ನು ಕಾಂಪೌಂಡ್ ಗೆ ಅಳವಡಿಸಲಾಗಿದೆ. ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಕಾಂಪೌಂಡ್ ಗೆ ಕನ್ನಡಿ ಮಾದರಿ ರಿಫ್ಲೆಕ್ಷನ್ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಖಾಲಿ ಕಾಂಪೌಂಡ್ ಗಳ ಮುಂದೆ ನಿಂತು ಮೂತ್ರ ವಿಸರ್ಜನೆ ಬ್ರೇಕ್‌ಗೆ ಹಾಕಲು ಪಾಲಿಕೆ (mysuru city corporation)  ಈ ಹೊಸ ಐಡಿಯಾ ಮಾಡಿದೆ. 80 ಮೀಟರ್ ಕಾಂಪೌಂಡ್ ಗೆ ಸ್ಟೇನ್ ಲೆಸ್ ಸ್ಟೀಲ್ ರಿಫ್ಲಕ್ಷನ್ ಅಳವಡಿಕೆ ಮಾಡಲಾಗಿದ್ದು, ಸ್ಟೇನ್ ಲೆಸ್ ಸ್ಟೀಲ್ ಮೂಲಕ ಕನ್ನಡಿ‌ ಮಾದರಿ ಪ್ರತಿಬಿಂಬ ಕಾಣುವಂತೆ ಹಾಕಲಾಗಿದೆ. ಅದರ‌ ಮುಂದೆ ನಿಂತರೆ ಸಂಪೂರ್ಣ ಚಿತ್ರಣ ಹಿಂಬದಿಯವರಿಗೆ ಕಾಣುತ್ತದೆ. ರಾತ್ರಿ ವೇಳೆ ಸ್ಟ್ರೀಟ್ ಲೈಟ್ ಆನ್ ಆಗುತ್ತಿದಂತೆ ಬಲ್ಬ್ ಕೂಡ ಆನ್ ಆಗುತ್ತದೆ. ಸುಮಾರು 9.5 ಲಕ್ಷ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, ಸದ್ಯ ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲೇ ಈ ಯೋಜನೆಗೊಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us