ಮೈಸೂರು ದಸರಾ ಉತ್ಸವ 2022: ಚಾಮರಾಜನಗರ ಸ್ತಬ್ಧ ಚಿತ್ರದ ಕೇಂದ್ರಬಿಂದು ಪುನೀತ್ ರಾಜಕುಮಾರ
ಕಳೆದ ವರ್ಷ ಆಕಸ್ಮಿಕ ಮರಣಕ್ಕೆ ತುತ್ತಾದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ ಮೂಲತಃ ಚಾಮರಾಜನಗರ ಜಿಲ್ಲೆಯವರು. ಅವರನ್ನೇ ಕೇಂದ್ರವಾಗಿಟ್ಟುಕೊಂಡು ಆ ಜಿಲ್ಲೆಯ ಟ್ಯಾಬ್ಲೋ ತಯಾರಾಗಿದೆ,
ಮೈಸೂರು ದಸರಾ ಉತ್ಸವದ ಕೊನೆಯ ದಿನ ಆಫ್ ಕೋರ್ಸ್ ಜಂಬೂ ಸವಾರಿ ಪ್ರಮುಖ ಆಕರ್ಷಣೆಯಾಗಿರುತ್ತದೆ. ಆದರೆ ಅದಕ್ಕೆ ಮೊದಲು ನಡೆಯುವ ರಾಜ್ಯದ 31 ಜಿಲ್ಲೆಗಳ ಕಲೆ-ಸಂಸ್ಕೃತಿಯ-ಪರಂಪರೆಯನ್ನು ಬಿಂಬಿಸುವ ಸ್ತಬ್ಧ ಚಿತ್ರಗಳ (ಟ್ಯಾಬ್ಲೋ) (tableau) ಪ್ರದರ್ಶನ ತನ್ನದೇ ಆದ ಮಹತ್ವ ಪಡೆದಿದೆ ಮತ್ತು ಆಕರ್ಷಣೆ ಹೊಂದಿದೆ. ನಮ್ಮೆಲ್ಲರಿಗೆ ಗೊತ್ತಿರುವಂತೆ ಕಳೆದ ವರ್ಷ ಆಕಸ್ಮಿಕ ಮರಣಕ್ಕೆ ತುತ್ತಾದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ (Puneet Rajkumar) ಮೂಲತಃ ಚಾಮರಾಜನಗರ (Chamarajanagar) ಜಿಲ್ಲೆಯವರು. ಅವರನ್ನೇ ಕೇಂದ್ರವಾಗಿಟ್ಟುಕೊಂಡು ಆ ಜಿಲ್ಲೆಯ ಟ್ಯಾಬ್ಲೋ ತಯಾರಾಗಿದೆ. ಟಿವಿ9 ಕನ್ನಡ ವರದಿಗಾರ ಹೇಳುವಂತೆ ಈ ಬಾರಿಯ ದಸರಾ ಉತ್ಸವದಲ್ಲಿ 47 ಸ್ತಬ್ಧ ಚಿತ್ರಗಳ ಪ್ರದರ್ಶನವಾಗಲಿದೆ.