ಮೈಸೂರು ದಸರಾ: ಮಹಿಷಾಸುರ ಮರ್ದಿನಿ ವಿಗ್ರಹದ ವಿಶೇಷಗಳ ಬಗ್ಗೆ ಅರ್ಚಕ ಶಶಿಶೇಖರ ದೀಕ್ಷಿತ್ ಮಾತು ಇಲ್ಲಿದೆ
ವಿಶ್ವವಿಖ್ಯಾತ ಮೈಸೂರು ದಸರಾ ಇಂದಿನಿಂದ ಆರಂಭಗೊಂಡು ಮುಂದಿನ ಹತ್ತು ದಿನಗಳ ಕಾಲ ನಡೆಯಲಿದೆ. ಈ ಸಂದರ್ಭದಲ್ಲಿ, ದಸರಾ ಉದ್ಘಾಟನೆಗೂ ಕೆಲವೇ ಕ್ಷಣಗಳ ಮುನ್ನ ಮೈಸೂರಿನ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ‘ಟಿವಿ9’ ಜತೆ ಮಾತನಾಡಿ, ಮಹಿಷಾಸುರ ಮರ್ದಿನಿ ವಿಗ್ರಹದ ವಿಶೇಷತೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಮೈಸೂರು, ಅಕ್ಟೋಬರ್ 3: ಮೈಸೂರಿನಾದ್ಯಂತ ದಸರಾ ಸಂಭ್ರಮ ಕಳೆಗಟ್ಟಿದ್ದು, ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ನವರಾತ್ರಿ ಪೂಜೆಗೆ ಸಕಲ ಸಿದ್ಧತೆ ನೆರವೇರಿದೆ. ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಮಾತನಾಡಿ, ಬ್ರಾಹ್ಮಿ ಮುಹೂರ್ತದಲ್ಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಮಹಿಷಾಸುರ ಸಂಹಾರಕ್ಕಾಗಿ ಅವತರಿಸಿದ ಚಾಮುಂಡೇಶ್ವರಿ ದೇವಿಯ ರೂಪದಲ್ಲಿ ವಿಗ್ರಹ ಇದೆ. ಅಷ್ಟಭುಜಗಳನ್ನು ಹೊಂದಿರುವುದು, ಆಯುಧಗಳನ್ನು ಹೊಂದಿರುವುದು ಸೇರಿದಂತೆ ಇನ್ನೂ ಹಲವು ವಿಶೇಷಗಳನ್ನು ವಿಗ್ರಹ ಹೊಂದಿದೆ ಎಂದು ಅವರು ಹೇಳಿದರು. ಅರ್ಚಕರು ನೀಡಿದ ವಿವರ ಇಲ್ಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ