ದಸರಾ ಆನೆಗಳಿಗೆ ದಿನಕ್ಕೆ ಎಷ್ಟು ಆಹಾರ ಬೇಕು? ಇದಕ್ಕೆ ಎಷ್ಟು ಹಣ ಖರ್ಚಾಗುತ್ತೆ ಗೊತ್ತಾ?

Edited By:

Updated on: Aug 17, 2025 | 12:25 PM

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯಲ್ಲಿ ಗಜಪಡೆ ಪಡೆಗಳು ಪಾಲ್ಗೊಳ್ಳಲಿದ್ದು, ಈಗಾಗಲೇ ಗಜಪಡೆಯ ತಾಲೀಮು ನಡೆದಿದೆ. ಇನ್ನು ಅರಮನೆಯಲ್ಲಿ ದಸರಾ ಗಜಪಡೆಗೆ ರಾಜಾತಿಥ್ಯ ನೀಡಲಾಗುತ್ತಿದ್ದು, ಪ್ರತಿನಿತ್ಯ 2 ಬಾರಿ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಪ್ರತ್ಯೇಕ ವಿಶೇಷ ಅಡುಗೆ ಕೋಣೆಯನ್ನು ನಿರ್ಮಿಸಲಾಗಿದ್ದು. ಒಟ್ಟು 14 ಆನೆಗಳ ಆಹಾರದ ವೆಚ್ಚ 55 ರಿಂದ 60 ಲಕ್ಷ ರೂ.

ಮೈಸೂರು, (ಆಗಸ್ಟ್ 17): ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯಲ್ಲಿ ಗಜಪಡೆ ಪಡೆಗಳು ಪಾಲ್ಗೊಳ್ಳಲಿದ್ದು, ಈಗಾಗಲೇ ಗಜಪಡೆಯ ತಾಲೀಮು ನಡೆದಿದೆ. ಇನ್ನು ಅರಮನೆಯಲ್ಲಿ ದಸರಾ ಗಜಪಡೆಗೆ ರಾಜಾತಿಥ್ಯ ನೀಡಲಾಗುತ್ತಿದ್ದು, ಪ್ರತಿನಿತ್ಯ 2 ಬಾರಿ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಪ್ರತ್ಯೇಕ ವಿಶೇಷ ಅಡುಗೆ ಕೋಣೆಯನ್ನು ನಿರ್ಮಿಸಲಾಗಿದ್ದು. ಒಟ್ಟು 14 ಆನೆಗಳ ಆಹಾರದ ವೆಚ್ಚ 55 ರಿಂದ 60 ಲಕ್ಷ ರೂ.

ಇನ್ನು ಈ ಬಗ್ಗೆ ಟಿವಿ9ಗೆ ಡಿಸಿಎಫ್ ಡಾ.ಪ್ರಭುಗೌಡ ಮಾತನಾಡಿದ್ದು, ಆನೆಗಳನ್ನು ಅರಮನೆಯಲ್ಲಿ ರಾಯಲ್ ಆಗಿ ನೋಡಿಕೊಳ್ಳುತ್ತೇವೆ. ನಿತ್ಯ ಗಂಡಾನೆಗೆ 750 ಕೆಜಿ ಆಹಾರ, ಹೆಣ್ಣಾನೆಗೆ 450 ಕೆಜಿ ಆಹಾರ ನೀಡಲಾಗುತ್ತದೆ. ನಿತ್ಯ ಆನೆಗಳಿಗೆ ಹಸಿರು ಹುಲ್ಲು, ಭತ್ತದ ಹುಲ್ಲು, ಕಬ್ಬು, ತರಕಾರಿಗಳನ್ನು ನೀಡುತ್ತೇವೆ. ಇದರಿಂದ ದಸರಾದಲ್ಲಿ ಪಾಲ್ಗೊಳ್ಳುವ 14 ಆನೆಗಳ ಆಹಾರ ವೆಚ್ಚ 55-60 ಲಕ್ಷ ರೂ. ಖರ್ಚಾಗುತ್ತದೆ. ಸದ್ಯ ಅರಮನೆಯಲ್ಲಿರುವ ಅಭಿಮನ್ಯು ನೇತೃತ್ವದ 9 ಆನೆಗಳು ಇದ್ದು, ಕೆಲವೇ ದಿನಗಳಲ್ಲಿ ಕಾಡಿನಿಂದ 5 ಆನೆಗಳು ಆಗಮಿಸಲಿವೆ ಎಂದು ಮಾಹಿತಿ ನೀಡಿದರು.