ಮೈಸೂರು ದಸರಾ 2026: ಜಂಬೂ ಸವಾರಿಗೆ ಕ್ಷಣಗಣನೆ; ಆನೆಗಳ ಮೈಮೇಲೆ ಮೂಡಿದ ಬಣ್ಣ ಬಣ್ಣದ ಚಿತ್ತಾರ
ಮೈಸೂರು ದಸರಾ 2026 ಜಂಬೂ ಸವಾರಿಗಾಗಿ ಕ್ಷಣಗಣನೆ ಆರಂಭವಾಗಿದೆ. ಲಕ್ಷಾಂತರ ಪ್ರವಾಸಿಗರು ಆಗಮಿಸಿದ್ದು, ದಸರಾ ಆನೆಗಳಿಗೆ ವಿಶೇಷ ಚಿತ್ತಾರ ಬಿಡಿಸುವ ಮೂಲಕ ಶೃಂಗಾರ ಮಾಡಲಾಗುತ್ತಿದೆ. ಅರಮನೆಯಲ್ಲಿ ಆಯುಧ ಪೂಜೆ ಹಾಗೂ ರಾಜವಂಶಸ್ಥರಿಂದ ಕಂಕಣ ವಿಸರ್ಜನಾ ಕಾರ್ಯ ನೆರವೇರಿದೆ. ಜಂಬೂ ಸವಾರಿಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.
ಮೈಸೂರು, ಅಕ್ಟೋಬರ್ 21: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸಡಗರ ಸಂಭ್ರಮ ಮೇಳೈಸಿದೆ. ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದ ಆನೆಗಳು ಸಕಲ ರೀತಿಯಲ್ಲಿ ಸಿದ್ಧಗೊಳ್ಳುತ್ತಿವೆ. ಆನೆಗಳಿಗೆ ವಿಶೇಷವಾಗಿ ಚಿತ್ತಾರ ಬಿಡಿಸುವ ಕೆಲಸ ಭರದಿಂದ ಸಾಗಿದೆ. ಕಲಾವಿದ ನಾಗಲಿಂಗಪ್ಪ ಅವರ ತಂಡವು ಶಂಖಚಕ್ರ, ಗಂಡಭೇರುಂಡ ಸೇರಿದಂತೆ ಸಾಂಪ್ರದಾಯಿಕ ವಿನ್ಯಾಸಗಳಿಂದ ಆನೆಗಳನ್ನು ಅಲಂಕರಿಸುತ್ತಿದೆ. ಪ್ರತಿ ಆನೆಗೆ ಚಿತ್ತಾರ ಬಿಡಿಸಲು ಒಂದರಿಂದ ಒಂದೂವರೆ ಗಂಟೆ ಬೇಕಾಗುತ್ತದೆ ಎಂದು ಕಲಾವಿದರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 21, 2026 12:07 PM
Follow Us

