ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ

Edited By:

Updated on: Sep 21, 2026 | 2:49 PM

ಮೈಸೂರು ದಸರಾ ಗೋಲ್ಡ್ ಕಾರ್ಡ್ ಟಿಕೆಟ್​: ಮೈಸೂರು ದಸರಾ 2026ರ ಗೋಲ್ಡ್ ಕಾರ್ಡ್‌ ಮಾರಾಟ ಆರಂಭಗೊಂಡಿದೆ. ಆನ್‌ಲೈನ್ ಮೂಲಕ ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಗೋಲ್ಡ್ ಕಾರ್ಡ್‌ಗೆ ರೂ. 6,500 ದರ ನಿಗದಿಪಡಿಸಲಾಗಿದೆ. ಜಂಬೂಸವಾರಿ, ಡ್ರೋನ್ ಶೋ, ಪಂಜಿನ ಕವಾಯತು ನೋಡಲು ಪ್ರತ್ಯೇಕವಾಗಿ ಟಿಕೆಟ್‌ ದರಗಳನ್ನು ನಿಗದಿಪಡಿಸಲಾಗಿದೆ.

ಮೈಸೂರು, ಸೆಪ್ಟೆಂಬರ್​​ 21: ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸಿದ್ಧತೆಗಳು ಬಿರುಸಿನಿಂದ ಸಾಗಿದ್ದು, ಇಂದಿನಿಂದ ದಸರಾ ಗೋಲ್ಡ್ ಕಾರ್ಡ್ ಹಾಗೂ ವಿವಿಧ ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ಮಾರಾಟವನ್ನು ಆರಂಭಿಸಲಾಗಿದೆ. ನಾಡಹಬ್ಬ ದಸರಾದ ವೈಭವವನ್ನು ಸವಿಯಲು ಇಚ್ಛಿಸುವ ಪ್ರವಾಸಿಗರು ಮತ್ತು ಸಾರ್ವಜನಿಕರಿಗಾಗಿ ವಿವಿಧ ಕಾರ್ಯಕ್ರಮಗಳ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಬುಕಿಂಗ್​​ ಮಾಡಲು ಅವಕಾಶ ಕೂಡ ಕಲ್ಪಿಸಲಾಗಿದೆ. ದಸರಾ ಗೋಲ್ಡ್ ಕಾರ್ಡ್ ದರವನ್ನು 6,500 ರೂ ಎಂದು ನಿಗದಿಪಡಿಸಲಾಗಿದೆ. ಈ ಗೋಲ್ಡ್ ಕಾರ್ಡ್‌ ಹೊಂದಿರುವವರಿಗೆ ಎಲ್ಲಾ ಕಾರ್ಯಕ್ರಮಗಳಿಗೆ ಪ್ರವೇಶವಿರುತ್ತದೆ. ಅಲ್ಲದೆ, ಮೈಸೂರು ಅರಮನೆ, ಮೃಗಾಲಯ ಮತ್ತು ಚಾಮುಂಡಿ ಬೆಟ್ಟಕ್ಕೆ ಒಮ್ಮೆ ಭೇಟಿ ನೀಡಲು ಅವಕಾಶವಿದೆ. ಇನ್ನು ಪ್ರತ್ಯೇಕ ಟಿಕೆಟ್‌ಗಳ ಪೈಕಿ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆಗೆ 3,500 ರೂ, ಪಂಜಿನ ಕವಾಯತು ವೀಕ್ಷಣೆಗೆ 1,500 ರೂ ಹಾಗೂ ಡ್ರೋನ್ ಶೋ ವೀಕ್ಷಣೆಗೆ 1,000 ರೂ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us