Mysuru Dasara: ಏರ್ ಶೋನಲ್ಲಿ ಲೋಹದ ಹಕ್ಕಿಗಳ ಕಲರವ
ಮೈಸೂರು ದಸರಾ ಹಿನ್ನಲೆ ಬನ್ನಿ ಮಂಟಪ ಪಂಜಿನ ಕಾವಯತು ಮೈದಾನದಲ್ಲಿ ಏರ್ ಶೋ ನಡೆಯಿತು. ದಸರಾ ಉದ್ಘಾಟಕಿ ಬಾನು ಮುಷ್ತಾಕ್ ಸೇರಿ ಸಾವಿರಾರು ಮಂದಿ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ನೋಡಿ ಸಂತಸಪಟ್ಟಿದ್ದಾರೆ. ಇಂಡಿಯನ್ ಏರ್ ಫೋರ್ಸ್ ಪೈಲೆಟ್ ಗಳ ಸಾಹಸ ಕಂಡು ಅವರಿಗೆ ಬಾನು ಮುಷ್ತಾಕ್ ಧನ್ಯವಾದವನ್ನೂ ತಿಳಿಸಿದ್ದಾರೆ.
ಮೈಸೂರು, ಅಕ್ಟೋಬರ್ 01: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ ಹಿನ್ನೆಲೆ ನಗರದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಏರ್ ಶೋ (Air Show) ನೋಡುಗರ ಕಣ್ಮನ ಸೆಳೆದಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳಲು ನೆರೆದಿದ್ದ ಸಾವಿರಾರು ಜನರ ಜೊತೆಗೆ, ದಸರಾ ಉದ್ಘಾಟಕಿ ಬಾನು ಮುಷ್ತಾಕ್ ಕೂಡ ಏರ್ ಶೋ ವೀಕ್ಷಿಸಿದ್ದಾರೆ. ಇಂಡಿಯನ್ ಏರ್ ಫೋರ್ಸ್ ಪೈಲೆಟ್ ಗಳ ಸಾಹಸ ಕಂಡು, ಸೂರ್ಯ ಕಿರಣ್ ತಂಡಕ್ಕೆ ಬಾನು ಮುಷ್ತಾಕ್ ಅಭಿನಂದನೆ ಸಲ್ಲಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos

