AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysuru Dasara Mahotsav-2024: ಜಂಬೂ ಸವಾರಿಗೆ 3-ದಿನ ಬಾಕಿ, ಪುಷ್ಪಾರ್ಚನೆ ರಿಹರ್ಸಲ್​​ನಲ್ಲಿ ಆನೆಗಳು ಭಾಗಿ

Mysuru Dasara Mahotsav-2024: ಜಂಬೂ ಸವಾರಿಗೆ 3-ದಿನ ಬಾಕಿ, ಪುಷ್ಪಾರ್ಚನೆ ರಿಹರ್ಸಲ್​​ನಲ್ಲಿ ಆನೆಗಳು ಭಾಗಿ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 09, 2024 | 12:06 PM

Share

Mysuru Dasara Mahotsav-2024: ಪುಷ್ಪಾರ್ಚನೆ ರಿಹರ್ಸಲ್​ಗೆ ಮೊದಲು ಪೊಲೀಸ್ ಸಿಬ್ಬಂದಿಯಿಂದ ನಡೆದ ಪಥಸಂಚಲನ ನೆರೆದ ಜನರ ಮೈನವಿರೇಳಿಸಿತು. ಡಿಸಿಪಿ ಮುತ್ತರಾಜ್, ಡಿಸಿಎಫ್ ಮತ್ತು ಸಿಎಅರ್ ಡಿಸಿಪಿ ಹೆಚ್ ಪಿ ಸತೀಶ್ ಮೊದಲಾದ ಆಧಿಕಾರಿಗಳು ಪುಷ್ಪಾರ್ಚನೆ ಕಾರ್ಯವನ್ನು ನೆರವೇರಿಸಿದರು.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮಖ ಆಕರ್ಷಣೆ ಜಂಬೂ ಸವಾರಿಗೆ ಕೇವಲ ಮೂರು ದಿನ ಮಾತ್ರ ಉಳಿದರುವಂತೆಯೇ ಇದರಲ್ಲಿ ಭಾಗಿಯಾಗುವ ಅಭಿಮನ್ಯು ನೇತೃತ್ವದ ಆನೆಗಳು ಇಂದು ಬೆಳಗ್ಗೆ ಅರಮನೆ ಅವರಣದಲ್ಲಿ ಪುಷ್ಪಾರ್ಚನೆ ರಿಹರ್ಸಲ್ ನಲ್ಲಿ ಪಾಲ್ಗೊಂಡವು. ದೃಶ್ಯಗಳಲ್ಲಿ ಕಾಣುವ ಹಾಗೆ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಸಾಗಿದ್ದು ಧನಂಜಯ ಹೆಸರಿನ ಆನೆ. ಉಳಿದ ಆನೆಗಳು ಅವನನ್ನು ಹಿಂಬಾಲಿಸಿ ಕ್ಯಾಪ್ಟನ್ ಅಭಿಮನ್ಯುಗೆ ಪುಷ್ಪಾರ್ಚನೆ ಮಾಡಿದವು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜಾವಾ ಹವಾ, ಅರಮನೆಯಂಗಳದಲ್ಲಿ ರಂಗೋಲಿಯ ಚಿತ್ತಾರ: ಮೈಸೂರು ದಸರಾ 2ನೇ ದಿನ ಕಲರ್ ಫುಲ್

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.