ಮೈಸೂರು ದಸರಾ ಜಂಬೂ ಸವಾರಿ: ಪೊಲೀಸ್ ಭದ್ರತೆ ಬಗ್ಗೆ ಐಜಿಪಿ ಡಾ ಸಲೀಂ ಹೇಳಿದ್ದೇನು ನೋಡಿ
ಮೈಸೂರು ದಸರಾ 2025ರ ಜಂಬೂಸವಾರಿಗಾಗಿ ಭದ್ರತಾ ಸಿದ್ಧತೆಗಳನ್ನು ಡಿಜಿ&ಐಜಿಪಿ ಡಾ. ಸಲೀಂ ಅವರು ಪರಿಶೀಲಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 6,500ಕ್ಕೂ ಹೆಚ್ಚು ಪೊಲೀಸರು, ವಿಶೇಷ ಕಾರ್ಯಪಡೆ ಹಾಗೂ ಬೆಂಗಳೂರು ನಗರ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. ಉತ್ಸಾಹದಿಂದ ಭಾಗವಹಿಸುವ ಜನರಿಗೆ ಸುರಕ್ಷಿತ ಅನುಭವ ನೀಡಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರು, ಅಕ್ಟೋಬರ್ 2: ಮೈಸೂರು ದಸರಾ 2025ರ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಡಿಜಿ ಹಾಗೂ ಐಜಿಪಿ ಡಾ. ಸಲೀಂ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಿದರು. ಇದೇ ವೇಳೆ, ‘ಟಿವಿ9’ ಜತೆ ಮಾತನಾಡಿದ ಅವರು, ಬಹಳ ವ್ಯವಸ್ಥಿತವಾಗಿ ಭದ್ರತೆ ಒದಗಿಸಲಾಗಿದೆ ಎಂದರು. ಜಂಬೂಸವಾರಿಯ ಸುಗಮ ನಿರ್ವಹಣೆಗಾಗಿ ಕಳೆದ ಕೆಲವು ದಿನಗಳಿಂದ ಉತ್ತಮ ತಾಲೀಮುಗಳನ್ನು ನಡೆಸಲಾಗಿದೆ. ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಎಲ್ಲವೂ ಸುಸೂತ್ರವಾಗಿ, ವ್ಯವಸ್ಥಿತವಾಗಿ ನಡೆಯಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. ಭದ್ರತಾ ದೃಷ್ಟಿಯಿಂದ ಸುಮಾರು 6,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇವರೊಂದಿಗೆ ವಿಶೇಷ ಕಾರ್ಯಪಡೆ ಮತ್ತು ಬೆಂಗಳೂರು ನಗರ ಸಂಚಾರ ಪೊಲೀಸರ ತಂಡಗಳು ಸಹ ಭದ್ರತಾ ಕರ್ತವ್ಯದಲ್ಲಿ ತೊಡಗಿಕೊಂಡಿವೆ ಎಂದು ಡಾ. ಸಲೀಂ ಮಾಹಿತಿ ನೀಡಿದರು.
