ಸಾಲು ರಜೆ, ಊರುಗಳತ್ತ ಮುಖಮಾಡಿದ ಜನ: ನೆಲಮಂಗಲದಲ್ಲಿ ಭಾರಿ ಟ್ರಾಫಿಕ್
ಹಬ್ಬದ ಹಾಗೂ ವಾರಾಂತ್ಯದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಗುರುವಾರ ದಿನವಿಡೀ ವಾಹನ ಸಂಚಾರ ಭಾರೀ ಹೆಚ್ಚಾಗಿದ್ದು, ನೆಲಮಂಗಲದ ಕುಣಿಗಲ್ ಬೈಪಾಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಸಂಚಾರ ಹರಸಾಹಸ ಪಡುತ್ತಿದ್ದಾರೆ. ನೆಲಮಂಗಲ ಟ್ರಾಫಿಕ್ ವಿಡಿಯೋ ಇಲ್ಲಿದೆ.
ನೆಲಮಂಗಲ, ಅಕ್ಟೋಬರ್ 2: ದಸರಾ ಹಬ್ಬ ಹಾಗೂ ವಾರಾಂತ್ಯದ ಸಾಲು ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರಿಗರು ಊರುಗಳತ್ತ ಹಾಗೂ ಪ್ರವಾಸಿ ತಾಣಗಳತ್ತ ಮುಖಮಾಡಿದ್ದಾರೆ. ಆಯುಧಪೂಜೆ ಮುಗಿಸಿಕೊಂಡ ನಂತರ ಊರುಗಳಿಗೆ ಹಾಗೂ ಪ್ರವಾಸಕ್ಕೆ ಹೊರಟ ಜನರ ಪ್ರವಾಹದಿಂದ ನೆಲಮಂಗಲದ ಕುಣಿಗಲ್ ಬೈಪಾಸ್ ರಸ್ತೆಯಲ್ಲಿ ಟ್ರಾಫಿಕ್ ಬಿಸಿ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 48 ಮೂಲಕ 75ಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸಹ ವಾಹನಗಳ ದಟ್ಟಣೆ ಹೆಚ್ಚಿದ್ದು, ಪ್ರಯಾಣಿಕರು ಗಂಟೆಗಳ ಕಾಲ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದಾರೆ.
ವಿಡಿಯೋ, ವರದಿ: ಮಂಜುನಾಥ್, ಟಿವಿ9, ನೆಲಮಂಗಲ
Latest Videos

