Mysuru Dasara: ಅಜ್ಜಿ ಜೊತೆ ದಸರಾ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದ ಆದ್ಯವೀರ ಒಡೆಯರ್‌

| Updated By: ಆಯೇಷಾ ಬಾನು

Updated on: Sep 23, 2024 | 9:55 AM

ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್​ ಅವರು ಅರಮನೆ ಖಾಸಗಿ ದರ್ಬಾರ್​​ಗೆ ಪಟ್ಟದ ಆನೆ, ನಿಶಾನೆ ಆನೆಗಳನ್ನು ಆಯ್ಕೆ ಮಾಡಿದ್ದಾರೆ. ಈ ವೇಳೆ ಪ್ರಮೋದಾದೇವಿ ಒಡೆಯರ್ ಜೊತೆ ಮೊಮ್ಮಗ ಆದ್ಯವೀರ ಒಡೆಯರ್‌ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದರು. ಹಾಘೂ ರಾಜಮಾತೆಯವರು ಆನೆಗಳ ಬಗ್ಗೆ ಮೊಮ್ಮಗನಿಗೆ ಮಾಹಿತಿ ತಿಳಿಸಿಕೊಟ್ಟರು.

ಮೈಸೂರು, ಸೆ.23: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ಕ್ಕೆ ದಿನಗಣನೆ ಶುರುವಾಗಿದೆ. ಸದ್ಯ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್​ ಅವರು ಅರಮನೆ ಖಾಸಗಿ ದರ್ಬಾರ್​​ಗೆ ಪಟ್ಟದ ಆನೆ, ನಿಶಾನೆ ಆನೆಗಳನ್ನು ಆಯ್ಕೆ ಮಾಡಿದ್ದಾರೆ. ಪಟ್ಟದ ಆನೆಯಾಗಿ ಕಂಜನ್, ನಿಶಾನೆ ಆನೆಯಾಗಿ ಭೀಮನನ್ನು ಆಯ್ಕೆ ಮಾಡಿದ್ದಾರೆ. ಅರಮನೆ ಆವರಣದಲ್ಲಿ ಪ್ರಮೋದಾದೇವಿ ಅವರು ಆನೆಗಳ ವೀಕ್ಷಣೆ ಮಾಡಿದರು. ಹಾಗೂ ಆನೆಗಳ ಬಗ್ಗೆ ಮೊಮ್ಮಗನಿಗೆ ಮಾಹಿತಿ ನೀಡಿದರು. ಈ ವೇಳೆ ಪ್ರಮೋದಾದೇವಿ ಒಡೆಯರ್ ಜೊತೆ ಮೊಮ್ಮಗ ಆದ್ಯವೀರ ಒಡೆಯರ್‌ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ