ಕೊಪ್ಪಳದ ಗೊಂಬೆಯಾಟ ಭೀಮವ್ವರಿಂದ ದಸರಾ ಉದ್ಘಾಟನೆ ಮಾಡಿಸಿ: ವಿಡಿಯೋ ವೈರಲ್​

Updated By: ಗಂಗಾಧರ​ ಬ. ಸಾಬೋಜಿ

Updated on: Aug 25, 2025 | 11:53 AM

ಕೊಪ್ಪಳದ ಮೊರನಾಳ ಗ್ರಾಮದ ಭೀಮವ್ವ, ತೊಗಲು ಗೊಂಬೆಯಾಟದ ಪ್ರಸಿದ್ಧ ಕಲಾವಿದೆ. 12 ದೇಶಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಪ್ರದರ್ಶನ ನೀಡಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮವ್ವರಿಂದ ಈ ವರ್ಷದ ದಸರಾ ಉದ್ಘಾಟಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿ.

ಕೊಪ್ಪಳ, ಆಗಸ್ಟ್​ 25: ದಸರಾ ಮಹೋತ್ಸವ (Mysuru Dasara) ಉದ್ಘಾಟಕರಾಗಿ ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಇದಕ್ಕೆ ಕೆಲ ಹಿಂದೂ ಸಂಘಟನೆ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ತೊಗಲು ಗೊಂಬೆಯಾಟದಿಂದ ಪ್ರಸಿದ್ದಿ ಪಡೆದಿರುವ ಪದ್ಮಶ್ರೀ ಭೀಮವ್ವ ಅವರಿಂದ ದಸರಾ ಉದ್ಘಾಟನೆ ಮಾಡಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್​ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಮೊರನಾಳ‌ ಗ್ರಾಮದ ಭೀಮವ್ವ ಅವರು 12 ದೇಶಗಳಲ್ಲಿ ರಾಮಾಯಣ, ಮಾಹಾಭಾರತವನ್ನು ಗೊಂಬೆಯಾಟದ ಮೂಲಕ ಪ್ರದರ್ಶಿಸಿದ್ದಾರೆ. ಹೀಗಾಗಿ ಇವರಿಂದ ದಸರಾ ಉದ್ಘಾಟಿಸುವಂತೆ ನ್ಯೂಸ್​ ಬಜ್​ ಎಂಬ ​ಸೋಶಿಯಲ್ ಮೀಡಿಯಾದಿಂದ ವಿಡಿಯೋ ವೈರಲ್​ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Aug 25, 2025 11:53 AM