ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೊಸ ಮನೆ ಹೇಗಿದೆ ನೋಡಿ

Edited By:

Updated on: Oct 03, 2025 | 2:04 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೊಸ ನಿವಾಸ ಮೈಸೂರಿನ ಕುವೆಂಪು ನಗರ ವಿಶ್ವಮಾನ ಜೋಡಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿದ್ದು, ಡಿಸೆಂಬರ್​​ನಲ್ಲಿ ಗೃಹ ಪ್ರವೇಶ ನಡೆಯಲಿದೆ. ಇಂದು ಸ್ಥಳಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಡಿಸೆಂಬರ್​​ನಲ್ಲಿ ಕುಟುಂಬಸ್ಥರು ಮಾತ್ರ ಗೃಹ ಪ್ರವೇಶ ಮಾಡಿಕೊಳ್ಳುತ್ತೇವೆ ಎಂದರು. ಸಿದ್ದರಾಮಯ್ಯ ಹೊಸ ನಿವಾಸದ ವಿಡಿಯೋ ಇಲ್ಲಿದೆ.

ಮೈಸೂರು, ಅಕ್ಟೋಬರ್ 3: ಮೈಸೂರಿನ ಕುವೆಂಪು ನಗರ ವಿಶ್ವಮಾನ ಜೋಡಿ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೊಸ ನಿವಾಸ ಬಹುತೇಕ ನಿರ್ಮಾಣವಾಗಿದೆ. ಶುಕ್ರವಾರ ಮನೆ ನಿರ್ಮಾಣ ಸ್ಥಳಕ್ಕೆ ಬಂದ ಸಿದ್ದರಾಮಯ್ಯ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮನೆಯನ್ನು ವೀಕ್ಷಿಸಿದರು. ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ಮನೆ ಕೆಲಸ ಬಹುತೇಕ ಮುಕ್ತಾಯವಾಗಿದೆ. ಡಿಸೆಂಬರ್‌ನಲ್ಲಿ ಗೃಹ ಪ್ರವೇಶ ಮಾಡುತ್ತೇನೆ ಎಂದರು.

ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ