Loading video

ಯದುವೀರ್ ದಂಪತಿಗೆ ಹುಟ್ಟಿರುವ ಎರಡನೇ ಮಗುವಿನ ಹೆಸರು ಯುಗಾಧ್ಯಕ್ಷ್ ಕೃಷ್ಣರಾಜ್ ಒಡೆಯರ್

|

Updated on: Feb 26, 2025 | 10:27 AM

ನಾಡಿನ ಸಮಸ್ತ ಕನ್ನಡಗರಿಗೆ ಯದುವೀರ್ ಕೃಷ್ಣದತ್ತ ಒಡೆಯರ್ ಮಹಾಶಿವರಾತ್ರಿಯ ಶುಭಾಷಯಗಳನ್ನು ತಿಳಿಸುವ ಮೊದಲು ಮೈಸೂರಿನಲ್ಲಿರುವ ತ್ರಿನೇಶ್ವರ ದೇವಸ್ಥಾನಕ್ಕೆ ಕುಟುಂಬಸಮೇತ ತೆರಳಿ ಪೂಜೆ ಸಲ್ಲಿಸಿದರು. ಇವತ್ತು ಸಾಯಂಕಾಲ ಅರಮನೆ ಆವರಣದಲ್ಲಿ ಪರಶಿವನ ಪೂಜೆ ನಡೆಯಲಿದೆ ಮತ್ತು ಮಧ್ಯಾಹ್ನದ ಸಮಯದಲ್ಲಿ ನಗರದಲ್ಲಿರುವ ದೇವಸ್ಥಾನಗಳು ತನ್ನನ್ನು ಆಹ್ವಾನಿಸಿದರೆ ಹೋಗಿ ಪೂಜೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಯದುವೀರ್ ಹೇಳಿದರು.

ಮೈಸೂರು: ಹಿಂದಿನ ಮೈಸೂರು ಒಡೆಯರ್ ಸಂಸ್ಥಾನದ ಪ್ರತಿನಿಧಿಯಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎರಡನೇ ಮಗುವಾಗಿರುವ ಮತ್ತು ಮಗುವಿನ ನಾಮಕರಣ ಸಮಾರಂಭವೂ ನಡೆದಿರುವ ಸಂಗತಿ ಬಹಳಷ್ಟು ಕನ್ನಡಿಗರಿಗೆ ಗೊತ್ತಿರಲಾರದು. ಖುದ್ದು ಯದುವೀರ್ ಅವರೇ ಮಗುವಿನ ನಾಮಕರಣದ ನಡೆದ ಸಂಗತಿಯನ್ನು ಮಹಾಶಿವರಾತ್ರಿಯ ಶುಭದಿನವಾಗಿರುವ ಇಂದು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದರು. ಮಗುವಿಗೆ ಯುಗಾಧ್ಯಕ್ಷ್ ಕೃಷ್ಣರಾಜ್ ಒಡೆಯರ್ ಅಂತ ಹೆಸರಿಡಲಾಗಿದೆ ಎಂದು ಮೈಸೂರಿನ ಸಂಸದರೂ ಆಗಿರುವ ಯದುವೀರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಹಾಶಿವರಾತ್ರಿ: ಬೆಂಗಳೂರಿನ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ