Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಅಕ್ಕಿ ಕಾಳಿನ ಅಳತೆಯ ಕಲ್ಲಿನಲ್ಲಿ ಶಿವಲಿಂಗ ಕೆತ್ತಿದ ಶಿಲ್ಪಿ

ಕೊಪ್ಪಳ: ಅಕ್ಕಿ ಕಾಳಿನ ಅಳತೆಯ ಕಲ್ಲಿನಲ್ಲಿ ಶಿವಲಿಂಗ ಕೆತ್ತಿದ ಶಿಲ್ಪಿ

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ವಿವೇಕ ಬಿರಾದಾರ

Updated on: Feb 26, 2025 | 10:20 AM

ಕೊಪ್ಪಳದ ಖ್ಯಾತ ಶಿಲ್ಪಿ ಪ್ರಕಾಶ್ ಅವರು ಮಹಾಶಿವರಾತ್ರಿಯ ಪ್ರಯುಕ್ತ ಅಕ್ಕಿ ಕಾಳಿನ ಅಳತೆಯ ಕಲ್ಲಿನಲ್ಲಿ ಶಿವಲಿಂಗವನ್ನು ಕೆತ್ತಿದ್ದಾರೆ. ಇದನ್ನು ಕೇವಲ ಒಂದು ಗಂಟೆಯಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರಕಾಶ್ ಅವರು ಈ ಹಿಂದೆ ಅಕ್ಕಿ ಕಾಳಿನಲ್ಲಿ ಗಾಂಧೀಜಿಯ ಮೂರ್ತಿಯನ್ನೂ ಕೆತ್ತಿದ್ದಾರೆ. ಅವರ ಅದ್ಭುತ ಕೌಶಲ್ಯಕ್ಕೆ ಇದು ಸಾಕ್ಷಿಯಾಗಿದೆ.

ಕೊಪ್ಪಳ, ಫೆಬ್ರವರಿ 26: ಮಹಾ ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಅಕ್ಕಿ ಕಾಳಿನ ಅಳತೆಯ ಕಲ್ಲಿನಲ್ಲಿ ಶಿವಲಿಂಗ ಕೆತ್ತಲಾಗಿದೆ. ಉತ್ತರ ಕರ್ನಾಟಕದ ಖ್ಯಾತ ಶಿಲ್ಪಿಯಾಗಿರುವ ಪ್ರಕಾಶ ಅವರು ಅಕ್ಕಿ ಕಾಳಿನ‌ ಅಳತೆಯ ಕಲ್ಲಿನಲ್ಲಿ ಶಿವಲಿಂಗವನ್ನು ಕೇವಲ ಒಂದೇ ತಾಸಿನಲ್ಲಿ ಕೆತ್ತಿದ್ದಾರೆ. ಶಿಲ್ಪಿ ಪ್ರಕಾಶ್​ ಈ ಹಿಂದೆ ಅಕ್ಕಿ ಕಾಳಿನಲ್ಲಿ ಗಾಂಧಿ, ಕಲ್ಲಿನ ಕೊರಳು ಕೆತ್ತನೆ ಮಾಡಿದ್ದರು. ಶಿಲ್ಪಿ ಪ್ರಕಾಶ್ ವಿವಿಧ ಮೂರ್ತಿಗಳನ್ನು ಶಿಲೆ, ಲೋಹಗಳಿಂದ ಕೆತ್ತನೆ ಮಾಡಿದ್ದಾರೆ.