ಪ್ರವಾಸಿಗರ ಕ್ಯಾಮರಾಗೆ ಪೋಸ್ ಕೊಟ್ಟ ಹುಲಿರಾಯ: ವಿಡಿಯೋ ನೋಡಿ

Edited By:

Updated on: Aug 16, 2025 | 11:19 AM

ಮೈಸೂರಿನ ನಾಗರಹೊಳೆ ಕಬಿನಿ ಹಿನ್ನೀರು ವಲಯದಲ್ಲಿ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಹುಲಿಗಳ ದರ್ಶನವಾಗಿದೆ. ಕಬಿನಿ ಹಿನ್ನೀರು ಪ್ರದೇಶದಲ್ಲಿ ಹುಲಿಗಳು ಕಾಣಿಸಿಕೊಂಡಿದ್ದು, ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಳೆಗಾಲದ ಹಿನ್ನೆಲೆಯಲ್ಲಿ ನಾಗರಹೊಳೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹುಲಿಗಳನ್ನು ನೋಡಿ ಪ್ರವಾಸಿಗರು ಪುಳಕಿತರಾಗಿದ್ದಾರೆ. ವಿಡಿಯೋ ನೋಡಿ.

ಮೈಸೂರು, ಆಗಸ್ಟ್​ 16: ನಾಗರಹೊಳೆ ಸಫಾರಿ ವೇಳೆ ಪ್ರವಾಸಿಗರ ಕ್ಯಾಮರಾಗೆ ಹುಲಿಗಳು (tiger) ಪೋಸ್​ ನೀಡಿರುವ ದೃಶ್ಯ ಕಬಿನಿ ಹಿನ್ನೀರು ವಲಯದಲ್ಲಿ ಕಂಡುಬಂದಿದೆ. ಹುಲಿಗಳನ್ನ ನೋಡಿ ಸಫಾರಿಗರು ಪುಳಕಿತರಾದರು. ನಾಗರಹೊಳೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.