ಮೈಸೂರು ಉದಯಗಿರಿ ಗಲಾಟೆ: ಅಸಲಿಗೆ ಅಲ್ಲಿ ನಡೆದಿದ್ದೇನು? ಎಡಿಜಿಪಿ ಆರ್ ಹಿತೇಂದ್ರ ಹೇಳಿದ್ದಿಷ್ಟು
ಮೈಸೂರು ಉದಯಗಿರಿಯಲ್ಲಿ ನಡೆದ ಗಲಾಟೆ ಬಗ್ಗೆ ಎಡಿಜಿಪಿ ಆರ್ ಹಿತೇಂದ್ರ ಮಾಹಿತಿ ನೀಡಿದ್ದಾರೆ. ಉದಯಗಿರಿ ಪೊಲೀಸ್ ಠಾಣೆ ಬಳಿ ಮಾತನಾಡಿದ ಅವರು, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಗಲಾಟೆಯ ಹಿಂದೆ ಯಾವುದಾದರೂ ಸಂಘಟನೆಯ ಕೈವಾಡ ಇದೆಯಾ ಎಂದು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮೈಸೂರು, ಫೆಬ್ರವರಿ 11: ಉದಯಗಿರಿ ಗಲಾಟೆಯಲ್ಲಿ ಏಳು ಜನ ಪೊಲೀಸರಿಗೆ ಗಾಯ ಆಗಿದೆ ಎಂದು ಎಡಿಜಿಪಿ ಆರ್ ಹಿತೇಂದ್ರ ತಿಳಿಸಿದರು. ಉದಯಗಿರಿ ಪೊಲೀಸ್ ಠಾಣೆ ಬಳಿ ಮಾತನಾಡಿದ ಅವರು, ಗಲಾಟೆ ಮಾಡಿದವರ ಬಂಧನಕ್ಕೆ ಸ್ಥಳೀಯ ಪೊಲೀಸರಿಂದ ತಂಡ ರಚನೆ ಮಾಡಲಾಗಿದೆ. ಅವಹೇಳನಕಾರಿ ಪೋಸ್ಟರ್ ಹಾಕಿದ ವಿಚಾರದಲ್ಲಿ ಆರೋಪಿಯನ್ನು ಬೇಗ ಬಿಟ್ಟು ಬಿಡುತ್ತಾರೆ ಎಂದು ಕೆಲವರು ಗಲಾಟೆ ಮಾಡಿದ್ದಾರೆ. ಪೋಸ್ಟರ್ ವಿಚಾರದಲ್ಲಿ ಕೆಲವು ವಂದತಿ ಹಬ್ಬಿದ್ದಕ್ಕೆ ಗಲಾಟೆಯಾಗಿದೆ. ಗಲಾಟೆಯ ಹಿಂದೆ ಯಾರಿದ್ದಾರೆ? ಯಾವುದಾದರೂ ಸಂಘಟನೆ ಇದೆಯಾ ಎಂದು ತನಿಖೆಯಿಂದ ಗೊತ್ತಾಗಲಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಕಿಡಿ ಹೊತ್ತಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್: ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ, ಅಶ್ರುವಾಯು ಪ್ರಯೋಗ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Feb 11, 2025 11:22 AM