ಸಂಸತ್ ಭವನಕ್ಕೆ ನುಗ್ಗಿದ ಮೈಸೂರಿನ ಯುವಕ ಇಂಜಿನೀಯರಿಂಗ್ ಪದವೀಧರ, ತುಂಬಾ ಒಳ್ಳೆಯವನು ಅನ್ನುತ್ತಾರೆ ತಂದೆ!

|

Updated on: Dec 13, 2023 | 4:29 PM

ದೆಹಲಿ-ಬೆಂಗಳೂರು-ಮೈಸೂರು ಅಂತ ಓಡಾಡುತ್ತಿದ್ದ, ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಅನ್ನೋ ಉತ್ಕಟ ಆಸೆ ಅವನಲ್ಲಿತ್ತು ಎಂದು ತಂದೆ ಅವರು ಹೇಳುತ್ತಾರೆ. ಮನೋರಂಜನ್ ಜೊತೆ ಮತ್ತೊಬ್ಬ ಸಂಸತ್ ಪ್ರವೇಶಿಸಿದ್ದರೆ, ಹೊರಗಡೆ ಒಬ್ಬ ಯುವತಿ ಮತ್ತು ಯುವಕ ಘೋಷಣೆಗಳನ್ನು ಕೂಗುತ್ತಿದ್ದರು. ಅವರ ಉದ್ದೇಶ ಏನಾಗಿತ್ತು ಅನ್ನೋದು ವಿಚಾರಣೆಯ ನಂತರ ಗೊತ್ತಾಗಲಿದೆ.

ಮೈಸೂರು: ಸಂಸತ್ತಿನ ಉಭಯ ಸದನಗಳಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಇವತ್ತು ಜರುಗಿದ ಘಟನೆಯನ್ನು ಎಲ್ಲರೂ ನೋಡಿದ್ದಾರೆ. ಸಂಸತ್ ಭವನದೊಳಗೆ ದಾಂಧಲೆ ನಡೆಸಿದ ಇಬ್ಬರಲ್ಲಿ ಒಬ್ಬನು ಕನ್ನಡಿಗ ಮತ್ತು ಮೈಸೂರಿನವನು. ಮನೋರಂಜನ್ ಹೆಸರಿನ ಯುವಕ ಇಂಜಿನೀಯರಿಂಗ್ ಪದವೀಧರ, ಆದರೆ 2014 ರಲ್ಲಿ ಅವನು ಪದವಿ ಪೂರೈಸಿದರೂ ಯಾವುದೇ ಕೆಲಸಕ್ಕೆ ಸೇರಿರಲಿಲ್ಲ. ಟಿವಿ9 ಮೈಸೂರು ವರದಿಗಾರ ನಗರದಲ್ಲಿರುವ ಮನೋರಂಜನ್ ತಂದೆಯೊಂದಿಗೆ ಮಾತಾಡಿದಾಗ, ಅವನು ಅಂಥವನಲ್ಲ, ಯಾರೋ ಅವನ ಬ್ರೇನ್ ವಾಷ್ ಮಾಡಿದ್ದಾರೆ ಅಂತ ಹೇಳುತ್ತಾರೆ. ಅಸಲಿಗೆ, ಅವರ ಮಗ ಹೊರಗಡೆ ಏನು ಮಾಡುತ್ತಿದ್ದ ಯಾರೊಂದಿಗೆ ಒಡನಾಟ ಇಟ್ಟಿಕೊಂಡಿದ್ದ ಅನ್ನೋದು ಅವರಿಗೆ ಗೊತ್ತಿಲ್ಲ. ದೆಹಲಿ-ಬೆಂಗಳೂರು-ಮೈಸೂರು ಅಂತ ಓಡಾಡುತ್ತಿದ್ದ, ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಅನ್ನೋ ಉತ್ಕಟ ಆಸೆ ಅವನಲ್ಲಿತ್ತು ಎಂದು ಅವರು ಹೇಳುತ್ತಾರೆ. ಮನೋರಂಜನ್ ಜೊತೆ ಮತ್ತೊಬ್ಬ ಸಂಸತ್ ಪ್ರವೇಶಿಸಿದ್ದರೆ, ಹೊರಗಡೆ ಒಬ್ಬ ಯುವತಿ ಮತ್ತು ಯುವಕ ಘೋಷಣೆಗಳನ್ನು ಕೂಗುತ್ತಿದ್ದರು. ಅವರ ಉದ್ದೇಶ ಏನಾಗಿತ್ತು ಅನ್ನೋದು ವಿಚಾರಣೆಯ ನಂತರ ಗೊತ್ತಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ