ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೈಸೂರು ಮೃಗಾಲಯದಲ್ಲಿ ಬೇಸಿಗೆಯ ತೀವ್ರ ಬಿಸಿಲಿನಿಂದ ಪ್ರಾಣಿಗಳನ್ನು ರಕ್ಷಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೆಟ್ ಸ್ಪ್ರಿಂಕ್ಲರ್‌ಗಳು, ನೆರಳಿನ ವ್ಯವಸ್ಥೆ ಮತ್ತು ತಂಪಾದ ಹಣ್ಣುಗಳ ವಿತರಣೆಯ ಮೂಲಕ ಪ್ರಾಣಿಗಳಿಗೆ ತಂಪನ್ನು ಒದಗಿಸಲಾಗುತ್ತಿದೆ. ಹುಲಿ, ಸಿಂಹ, ಆನೆ ಮುಂತಾದ ಪ್ರಾಣಿಗಳಿಗೆ ತಂಪಾದ ವಾತಾವರಣದ ವ್ಯವಸ್ಥೆ ಮಾಡಲಾಗಿದೆ.
ಮೈಸೂರು, ಮಾರ್ಚ್ 12: ಮೃಗಾಲಯದಲ್ಲಿರುವ (Z00) ಪ್ರಾಣಿ, ಪಕ್ಷಿಗಳಿಗೂ ಬೇಸಿಗೆ ಬಿಸಿ ತಟ್ಟಿದೆ. ಹೀಗಾಗಿ ಪ್ರಾಣಿಗಳನ್ನ ಕೂಲಾಗಿಡಲು ಮೃಗಾಲಯ ಸಿಬ್ಬಂದಿ ಮುಂದಾಗಿದ್ದು, ಜೆಟ್ ಸ್ಪ್ರಿಂಕ್ಲರ್ ಮೂಲಕ ಕೃತಕ ಮಳೆ ಸುರಿಸಿ ವಾತಾವರಣ ಕೂಲ್ ಮಾಡುವ ಪ್ರಯತ್ನ ಮಾಡಲಾಗಿದೆ. ಹುಲಿ, ಸಿಂಹ, ಕರಡಿ, ಆನೆ, ಗೊರಿಲ್ಲಗಳಿಗೆ ಮೈ ಮೇಲೆ ನೀರು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.