‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರದ ಶೂಟಿಂಗ್​ಗೆ ಗಣಿ ಧಣಿಗಳು ವಿರೋಧ ವ್ಯಕ್ತಪಡಿಸಿದಾಗ ಬೆಂಬಲಕ್ಕೆ ನಿಂತಿದ್ದು ವಿಷ್ಣುವರ್ಧನ್!

| Updated By: shivaprasad.hs

Updated on: Sep 19, 2021 | 5:42 PM

ಟಿವಿ9ನೊಂದಿಗೆ ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರದ ಸುಂದರ ನೆನಪುಗಳನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮೆಲುಕು ಹಾಕಿದ್ದಾರೆ. ಇದರ ಜೊತೆಜೊತೆಗೆ ವಿಷ್ಣುವರ್ಧನ್ ಅವರ ವ್ಯಕ್ತಿತ್ವವನ್ನೂ ಅವರು ತೆರೆದಿಟ್ಟಿದ್ದಾರೆ.

‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರ ಕನ್ನಡ ಚಿತ್ರಗಳ ಸಾಲಿನಲ್ಲಿ ವಿಶೇಷವಾಗಿ ನಿಲ್ಲುವ ಸಿನಿಮಾ. ನಾಗತಿಹಳ್ಳಿ ಚಂದ್ರಶೇಖರ್  ನಿರ್ದೇಶಿಸಿದ ಈ ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿಚ್ಚ ಸುದೀಪ್, ಸುಹಾಸಿನಿ ಮೊದಲಾದವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದಲ್ಲಿ ರೂಪಕಗಳ ಮುಖಾಂತರ ಕತೆ ಕಟ್ಟಿದ ಬಗೆಯನ್ನು ನಾಗತಿಹಳ್ಳಿ ವಿವರಿಸಿದ್ದಾರೆ. ವಿಷ್ಣುವರ್ಧನ್ ಪಾತ್ರ ಗಾಂಧೀಜಿಯವರ ರೂಪಕವಾಗಿ ಹಾಗೂ ಸುದೀಪ್ ಪಾತ್ರ ಹಿಟ್ಲರ್ ರೂಪಕವಾಗಿ ಕಟ್ಟಿದ್ದರ ಕುರಿತು ನಿರ್ದೇಶಕರು ಮಾತನಾಡಿದ್ದಾರೆ. ಅವರೀರ್ವರ ಸಂಭಾಷಣೆಯನ್ನು ನಟರು ಎಷ್ಟು ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ಅವರು ಹೊಗಳಿದ್ದಾರೆ. ಅಷ್ಟೇ ಅಲ್ಲದೇ, ಆ ಚಿತ್ರ ಚಿತ್ರೀಕರಣದ ಸಮಯದಲ್ಲಿ ‘ಗಣಿ ದೊರೆಗಳು’ ಬೆದರಿಕೆ ಒಡ್ಡಿದ್ದನ್ನು ಅವರು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದು ವಿಷ್ಣುವರ್ಧನ್ ಎಂದು ನಾಗತಿಹಳ್ಳಿ ವಿಷ್ಣು ಅವರ ವ್ಯಕ್ತಿತ್ವವನ್ನು ತೆರೆದಿಟ್ಟಿದ್ದಾರೆ. ಸಂದರ್ಶನದಲ್ಲಿ ಆ ಚಿತ್ರಕ್ಕೆ ಗೀತೆ ರಚಿಸಿದ ಗೊಲ್ಲಹಳ್ಳಿ ಶಿವಪ್ರಸಾದ್ ಕುರಿತು ಅವರು ಮಾತನಾಡಿದ್ದಾರೆ.

ಇದನ್ನೂ ಓದಿ:

ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರ ಯಾವ ಹಂತದಲ್ಲಿದೆ? ಇಲ್ಲಿದೆ ಕುತೂಹಲಕರ ಮಾಹಿತಿ

ಸೀತೆ ಪಾತ್ರ ಮಾಡಲು ಕಂಗನಾಗೆ 32 ಕೋಟಿ ರೂ. ಸಂಬಳ? ಇದು ದೊಡ್ಡ ಪ್ರಮಾದ ಎಂದ ಕಮಾಲ್​ ಖಾನ್​

(Nagathihalli Chandrashekhar opens up about Vishnuvardhan and his support for Matadu Matadu Mallige in TV9 interview)

Published on: Sep 19, 2021 05:37 PM