AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರ ಯಾವ ಹಂತದಲ್ಲಿದೆ? ಇಲ್ಲಿದೆ ಕುತೂಹಲಕರ ಮಾಹಿತಿ

Prabhas: ಪ್ರಸ್ತುತ ಪ್ರಭಾಸ್ ಆದಿಪುರುಷ್ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರ ಯಾವ ಹಂತದಲ್ಲಿದೆ? ಇಲ್ಲಿದೆ ಕುತೂಹಲಕರ ಮಾಹಿತಿ
ಆದಿಪುರುಷ್ ಚಿತ್ರದ ಪೋಸ್ಟರ್(ಎಡ), ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ (ಬಲ)
Follow us
TV9 Web
| Updated By: shivaprasad.hs

Updated on: Sep 19, 2021 | 5:17 PM

ಬಾಹುಬಲಿ ಚಿತ್ರದ ಮೂಲಕ ಪ್ರಭಾಸ್ ವರ್ಚಸ್ಸು ಒಮ್ಮೆಲೇ ಬದಲಾಯಿತು. ಆ ಚಿತ್ರದ ಮೂಲಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್‌ ಆಗಿ ಬದಲಾದರು. ಇದರೊಂದಿಗೆ ನಿರ್ಮಾಪಕರು ಅವರೊಂದಿಗೆ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸಲು ಆಸಕ್ತಿ ತೋರುತ್ತಿದ್ದಾರೆ. ಪ್ರಸ್ತುತ, ಪ್ರಭಾಸ್ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಿರತರಾಗಿದ್ದಾರೆ. ಕೆಜಿಎಫ್​ ಮುಖಾಂತರ ವಿಶ್ವದ ಗಮನ ಸೆಳೆದ ಪ್ರಶಾಂತ್ ನೀಲ್​ರೊಂದಿಗೆ ಪ್ರಭಾಸ್, ‘ಸಲಾರ್’ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಇದರೊಂದಿಗೆ ಅವರು ಸಕ್ರಿಯವಾಗಿ ನಟಿಸುತ್ತಿರುವ ಚಿತ್ರ ‘ಆದಿಪುರುಷ್’.

ಬಾಲಿವುಡ್​ ನಿರ್ದೇಶಕ ಓಂ ರಾವುತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಾಲಿವುಡ್ ಬೆಡಗಿ ಕೃತಿ ಸನೂನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಮುಂದಿನ ದೊಡ್ಡ ಶೆಡ್ಯೂಲ್ ಮುಂಬೈನಲ್ಲಿ ಪ್ರಾರಂಭವಾಗಲಿದೆ. ಈ ಶೆಡ್ಯೂಲ್​ನಲ್ಲಿ ಸುಮಾರು ಇಪ್ಪತ್ತೈದು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಶೇಷವಾಗಿ ಕ್ಲೈಮ್ಯಾಕ್ಸ್‌ನಲ್ಲಿನ ಸಾಹಸ ದೃಶ್ಯಗಳು ಈ ಶೆಡ್ಯೂಲ್​ನಲ್ಲಿ ಚಿತ್ರೀಕರಣವಾಗಲಿದೆ. ಈ ಆಕ್ಷನ್ ಸೀಕ್ವೆನ್ಸ್​​ಗಳಿಗಾಗಿ ಪ್ರಭಾಸ್ ಇತ್ತೀಚೆಗೆ ರಿಹರ್ಸಲ್ ಆರಂಭಿಸಿದ್ಧಾರೆ.

ಮೊದಲು ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಿ, ನಂತರ ಮಾತಿನ ಭಾಗದ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಭಾರೀ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಪೌರಾಣಿಕ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೂನ್ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ರಾವಣನ ಪಾತ್ರ ನಿರ್ವಹಿಸಲಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹತ್ವಾಕಾಂಕ್ಷೆಯ ಈ ಚಿತ್ರವು ಮುಂದಿನ ವರ್ಷ ಅಕ್ಟೋಬರ್ 11 ರಂದು ಬಿಡುಗಡೆಯಾಗಲಿದೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೇಶ್ಯಾಮ್’ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇತ್ತ ‘ಸಲಾರ್’ ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದ್ದು, ಶೃತಿ ಹಾಸನ್ ಮತ್ತು ಇತರ ಪಾತ್ರಗಳ ಭಾಗದ ಚಿತ್ರೀಕರಣ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಲಿದೆ. ಈ ಚಿತ್ರಗಳ ನಂತರ ಪ್ರಭಾಸ್ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಅಭಿಮಾನಿಗಳು ಈಗಲೇ ಚರ್ಚಿಸಲು ಆರಂಭಿಸಿದ್ದಾರೆ.

ಇದನ್ನೂ ಓದಿ:

ತಂದೆ-ತಾಯಿ ವಿರುದ್ಧವೇ ಕೋರ್ಟ್​ ಮೆಟ್ಟಿಲೇರಿದ ನಟ ದಳಪತಿ ವಿಜಯ್; ಇದು ಸರಿ ಇದೆ ಎಂದ ಫ್ಯಾನ್ಸ್​​

ಸೀತೆ ಪಾತ್ರ ಮಾಡಲು ಕಂಗನಾಗೆ 32 ಕೋಟಿ ರೂ. ಸಂಬಳ? ಇದು ದೊಡ್ಡ ಪ್ರಮಾದ ಎಂದ ಕಮಾಲ್​ ಖಾನ್​

(Prabhas preparing for Adipurush climax shoots says reports)

ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ
ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ
ತಿಲಕವನ್ನಿಟ್ಟುಕೊಂಡು ಸಿದ್ದರಾಮಯ್ಯ ಸಿಂಧೂರ ರಾಮಯ್ಯ ಆಗಿದ್ದಾರೆ: ಪ್ರತಾಪ್
ತಿಲಕವನ್ನಿಟ್ಟುಕೊಂಡು ಸಿದ್ದರಾಮಯ್ಯ ಸಿಂಧೂರ ರಾಮಯ್ಯ ಆಗಿದ್ದಾರೆ: ಪ್ರತಾಪ್
ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ
ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ