Loading video

ನಾಗೇಂದ್ರ, ತುಕಾರಾಂ, ಭರತ್ ರೆಡ್ಡಿ ಮೊದಲಾದವರೆಲ್ಲ ಅಲಿಬಾಬಾ ಮತ್ತು 40 ಕಳ್ಳರ ತಂಡದಂತೆ: ಬಿ ಶ್ರೀರಾಮುಲು

Updated on: Jun 11, 2025 | 2:58 PM

ಹಳೇದೋಸ್ತಿ ಮತ್ತು ಮಾಜಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಶ್ರೀರಾಮುಲು ಅದು ಕಾನೂನು ಪ್ರಕ್ರಿಯೆ, ಕೋರ್ಟ್​​ ಶಿಕ್ಷೆ ವಿಧಿಸಿದ ಬಳಿಕ ಜನಾರ್ಧನ ರೆಡ್ಡಿಯವರು ಅದನ್ನು ಪ್ರಶ್ನಿಸಿ ಹೈಕೋರ್ಟ್​ ಮೊರೆ ಹೋಗಿದ್ದರು, ಹೈಕೋರ್ಟ್ ಶಿಕ್ಷೆಯನ್ನು ತಡೆಹಿಡಿದಿದೆ ಎಂದು ಹೇಳಿದರು.

ಬೆಂಗಳೂರು, ಜೂನ್ 11: ಶಾಸಕರಾದ ಬಿ ನಾಗೇಂದ್ರ (B Nagendra), ಭರತ್ ರೆಡ್ಡಿ, ಮಾಜಿ ಶಾಸಕ ಕಂಪ್ಲಿ ಗಣೇಶ್ ಮತ್ತು ಬಳ್ಳಾರಿ ಸಂಸದ ಈ ತುಕಾರಾ ಮೊದಲಾದವರೆಲ್ಲ ಅಲಿಬಾಬಾ 40 ಕಳ್ಳರ ತಂಡವಿದ್ದಂತೆ, ಇವರಾಡುವ ಮಾತುಗಳನ್ನು ಕೇಳುತ್ತಿದ್ದರೆ ಪ್ರಪಂಚದಲ್ಲಿ ಇವರಷ್ಟು ಸಂಪನ್ನರು, ಗುಣವಂತರು ಯಾರೂ ಇಲ್ಲವೇನೋ ಎಂದೆನಿಸುತ್ತದೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಬಿ ಶ್ರೀರಾಮುಲು ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹ 187 ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಶಾಸಕ ಮತ್ತು ಸಂಸದರ ಮನೆ ಮತ್ತು ಕಚೇರಿಯ ಮೇಲೆ ಈಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಶ್ರೀರಾಮುಲು ಮೇಲಿನಂತೆ ನುಡಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಏಕನಾಥ ಶಿಂಧೆ ಎಪಿಸೋಡ್ ಮರುಕಳಿಸಿದರೆ ಯಾರೂ ಆಶ್ಚರ್ಯಪಡಬೇಕಿಲ್ಲ: ಬಿ ಶ್ರೀರಾಮುಲು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ