‘ಪ್ರತಾಪ್​ ಬೆನ್ನಿಗೆ ನಮ್ರತಾ ಚೂರಿ ಹಾಕಿದ್ರು’; ಬಿಗ್ ಬಾಸ್ ಪ್ರೋಮೋ ನೋಡಿ ಫ್ಯಾನ್ಸ್ ಶಾಕ್

|

Updated on: Dec 23, 2023 | 2:39 PM

ತಮ್ಮ ಪಾಲಿನ ಪಾಯಿಂಟ್ಸ್​ನ ಶೇರ್ ಮಾಡಿ ನಮ್ರತಾ ಕ್ಯಾಪ್ಟನ್ಸಿ ರೇಸ್​ನಲ್ಲಿ ಉಳಿದುಕೊಳ್ಳುವಂತೆ ಮಾಡಿದರು ಪ್ರತಾಪ್. ಆದರೆ, ಇದಾಗಿ ದಿನ ಕಳೆಯುವುದರೊಳಗೆ ನಮ್ರತಾ ಉಲ್ಟಾ ಹೊಡೆದಿದ್ದಾರೆ.

ನಮ್ರತಾ ಗೌಡ ಅವರು ಈ ವಾರ ಕ್ಯಾಪ್ಟನ್ ಆಗಿದ್ದಾರೆ. ನಮ್ರತಾ ಕ್ಯಾಪ್ಟನ್ ಆಗುವಲ್ಲಿ ಪ್ರತಾಪ್ ಪಾತ್ರವೂ ಇದೆ. ತಮ್ಮ ಪಾಲಿನ ಪಾಯಿಂಟ್ಸ್​ನ ಶೇರ್ ಮಾಡಿ ನಮ್ರತಾ ಕ್ಯಾಪ್ಟನ್ಸಿ ರೇಸ್​ನಲ್ಲಿ ಉಳಿದುಕೊಳ್ಳುವಂತೆ ಮಾಡಿದರು ಪ್ರತಾಪ್. ಆದರೆ, ಇದಾಗಿ ದಿನ ಕಳೆಯುವುದರೊಳಗೆ ನಮ್ರತಾ (Namratha Gowda) ಉಲ್ಟಾ ಹೊಡೆದಿದ್ದಾರೆ. ಪ್ರತಾಪ್ ಹಳ್ಳಿಯವರನ್ನು ಸೆಳೆಯಲು ಅಲ್ಲಿಯವರಂತೆ ಮಾತನಾಡುತ್ತಾರೆ ಅನ್ನೋದು ಕೆಲವರ ವಾದ. ಈ ವಾದಕ್ಕೆ ನಮ್ರತಾ ಕೂಡ ಧ್ವನಿಗೂಡಿಸಿದ್ದಾರೆ. ಇದಕ್ಕೆ ಪ್ರತಾಪ್ ಫ್ಯಾನ್ಸ್ ಅಸಮಾಧಾನ ಹೊರಹಾಕಿದ್ದಾರೆ. ‘ಪ್ರತಾಪ್​ ಬೆನ್ನಿಗೆ ನಮ್ರತಾ ಚಾಕು ಹಾಕಿದರು’ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಇಂದು (ಡಿಸೆಂಬರ್ 23) ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ