ತಮ್ಮ ಅಧಿಕಾರ ಬಳಸಿ ವಿನಯ್ನ ಆಟದಿಂದ ಹೊರಗಿಟ್ಟ ನಮ್ರತಾ; ಎಲ್ಲರಿಗೂ ಶಾಕ್
ಈ ಬಾರಿ ನಮ್ರತಾ ಗೌಡ ಅವರಿಗೆ ಇಂಥ ಅಧಿಕಾರ ಸಿಕ್ಕಿದೆ. ವಿನಯ್ ಗೌಡ ಅವರನ್ನು ನಮ್ರತಾ ಹೊರಗಿಟ್ಟಿದ್ದಾರೆ. ಅವರು ಈ ನಿರ್ಧಾರ ಪ್ರಕಟಿಸಿದಾಗ ಎಲ್ಲರಿಗೂ ಶಾಕ್ ಆಯಿತು. ಯಾಕೆಂದರೆ, ಆರಂಭದಿಂದಲೂ ವಿನಯ್ ಗೌಡ ಮತ್ತು ನಮ್ರತಾ ಗೌಡ ಅವರು ಒಂದೇ ಗುಂಪಿನಲ್ಲಿ ಇದ್ದರು.
ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆ ಬರಲಿದೆ. ಈಗ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ನೇರವಾಗಿ ಫಿನಾಲೆಗೆ ಹೋಗಲು ಅನುಕೂಲ ಆಗುವ ರೀತಿಯಲ್ಲಿ ಟಾಸ್ಕ್ ನೀಡಲಾಗುತ್ತಿದೆ. ಫಿನಾಲೆ (Bigg Boss Finale) ವೇದಿಕೆ ಹತ್ತಬೇಕು ಎಂಬುದು ಎಲ್ಲ ಸ್ಪರ್ಧಿಗಳ ಆಸೆ. ಹಾಗಾಗಿ ಈ ಟಾಸ್ಕ್ನಲ್ಲಿ ಎಲ್ಲರೂ ಶ್ರದ್ಧೆಯಿಂದ ಆಡುತ್ತಿದ್ದಾರೆ. ಒಂದು ರೌಂಡ್ ಬಳಿಕ ಟಾಸ್ಕ್ ಗೆದ್ದವರು ಒಬ್ಬ ಸ್ಪರ್ಧಿಯನ್ನು ಮುಂದಿನ ಹಂತದ ಆಟದಿಂದ ಹೊರಗೆ ಇಡುವ ಅಧಿಕಾರ ಪಡೆಯುತ್ತಾರೆ. ಈ ಬಾರಿ ನಮ್ರತಾ ಗೌಡ ಅವರಿಗೆ ಅಂಥ ಅಧಿಕಾರ ಸಿಕ್ಕಿದೆ. ವಿನಯ್ ಗೌಡ ಅವರನ್ನು ನಮ್ರತಾ ಹೊರಗಿಟ್ಟಿದ್ದಾರೆ. ಅವರು ಈ ನಿರ್ಧಾರ ಪ್ರಕಟಿಸಿದಾಗ ಎಲ್ಲರಿಗೂ ಶಾಕ್ ಆಯಿತು. ಯಾಕೆಂದರೆ, ಆರಂಭದಿಂದಲೂ ವಿನಯ್ ಗೌಡ (Vinay Gowda) ಮತ್ತು ನಮ್ರತಾ ಗೌಡ ಅವರು ಒಂದೇ ಗುಂಪಿನಲ್ಲಿ ಇದ್ದರು. ಆದರೆ ಅಂತಿಮ ಹಂತ ಸಮೀಪಿಸುತ್ತಿರುವಾಗ ನಮ್ರತಾ ಅವರು ಯಾವ ಮುಲಾಜೂ ಇಲ್ಲದೇ ವಿನಯ್ನ ಹೊರಗೆ ಇಟ್ಟಿದ್ದಾರೆ. ‘ಕಲರ್ಸ್ ಕನ್ನಡ’ ಮತ್ತು ‘ಜಿಯೋ ಸಿನಿಮಾ’ದಲ್ಲಿ ಜ.11ರಂದು ಈ ಸಂಚಿಕೆ ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ