Bigg Boss Kannada OTT: ಜಶ್ವಂತ್ ಬಿಟ್ಟು ಗುರೂಜಿ ಜೊತೆ ಶುರುವಾಯ್ತು ನಂದಿನಿ ಸುತ್ತಾಟ
Nandini | Jashwanth Bopanna: ಇಂಥ ಹಲವು ಕ್ಷಣಗಳಿಗೆ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋ ಸಾಕ್ಷಿ ಆಗುತ್ತಿದೆ. ಈಗ 5ನೇ ವಾರ ನಡೆಯುತ್ತಿದ್ದು, 6ನೇ ವಾರಕ್ಕೆ ಫಿನಾಲೆ ಜರುಗಲಿದೆ.
ಜಶ್ವಂತ್ ಬೋಪಣ್ಣ ಮತ್ತು ನಂದಿನಿ (Nandini) ಪ್ರೇಮಿಗಳು. ಆದರೆ ಬಿಗ್ ಬಾಸ್ನಲ್ಲಿ ಅವರು ಪ್ರತ್ಯೇಕ ಸ್ಪರ್ಧಿಗಳಾಗಿ ಆಟ ಆಡಬೇಕು. ಹಾಗಂತ ತಮ್ಮಿಬ್ಬರ ನಡುವಿನ ಪ್ರೀತಿಯನ್ನೂ ಕಳೆದುಕೊಳ್ಳುವಂತಿಲ್ಲ. ದಿನ ಕಳೆದಂತೆಲ್ಲ ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ವೈಮನಸ್ಸು ಮೂಡುತ್ತಿದೆ. ಅದೇ ಕಾರಣಕ್ಕೋ ಏನೋ ಜಶ್ವಂತ್ ಅವರನ್ನು ಬಿಟ್ಟು ಆರ್ಯವರ್ಧನ್ ಗುರೂಜಿ (Aryavardhan Guruji) ಜತೆ ನಂದಿನಿ ಕಾಲ ಕಳೆದಿದ್ದಾರೆ. ನಂದಿನಿ ಮತ್ತು ಗುರೂಜಿ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ತಿರುಗಾಡಿದ್ದಾರೆ. ಇಂಥ ಹಲವು ಕ್ಷಣಗಳಿಗೆ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋ ಸಾಕ್ಷಿ ಆಗುತ್ತಿದೆ. ಈಗ ಐದನೇ ವಾರ ನಡೆಯುತ್ತಿದೆ. ಆರನೇ ವಾರಕ್ಕೆ ಫಿನಾಲೆ ಜರುಗಲಿದೆ. ವೂಟ್ ಸೆಲೆಕ್ಟ್ ಒಟಿಟಿ ಮೂಲಕ ಈ ಶೋ ಪ್ರಸಾರ ಆಗುತ್ತಿದೆ.
Published on: Sep 08, 2022 09:16 AM