ಪ್ರಾಣಿಗಳ ಭಾಷೆಯಲ್ಲಿ ಮಾತಾಡಿಕೊಂಡ ನಂದಿನಿ, ಜಶ್ವಂತ್; ಬಿಗ್ ಬಾಸ್ನಲ್ಲಿ ಪ್ರೇಮಿಗಳ ಸಲ್ಲಾಪ
Bigg Boss Kannada OTT: ಆರನೇ ವಾರ ‘ಬಿಗ್ ಬಾಸ್ ಕನ್ನಡ ಒಟಿಟಿ’ ಫಿನಾಲೆ ನಡೆಯಲಿದೆ. ಫಿನಾಲೆ ವಾರಕ್ಕೆ ನಂದಿನಿ ಮತ್ತು ಜಶ್ವಂತ್ ಎಂಟ್ರಿ ಪಡೆಯುತ್ತಾರೋ ಇಲ್ಲವೋ ಎಂಬ ಕೌತುಕ ಮನೆ ಮಾಡಿದೆ.
ವೂಟ್ ಸೆಲೆಕ್ಟ್ ಮೂಲಕ ಪ್ರಸಾರ ಆಗುತ್ತಿರುವ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋ ಹಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಈಗ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ನಂದಿನಿ (Nandini) ಮತ್ತು ಜಶ್ವಂತ್ ಅವರು ರಿಯಲ್ ಲೈಫ್ನಲ್ಲಿ ಪ್ರೇಮಿಗಳು. ಬಿಗ್ ಬಾಸ್ ಮನೆಯಲ್ಲಿ ಈ ಪ್ರೇಮಿಗಳ ಸಲ್ಲಾಪ ಮುಂದುವರಿದಿದೆ. ಯೋಗ ಮಾಡುವ ವೇಳೆ ಇವರಿಬ್ಬರು ಪ್ರಾಣಿಗಳ ಭಾಷೆಯಲ್ಲಿ ಮಾತನಾಡಿಕೊಂಡಿದ್ದಾರೆ. ಆರನೇ ವಾರ ಫಿನಾಲೆ ನಡೆಯಲಿದೆ. ಫಿನಾಲೆ ವಾರಕ್ಕೆ ನಂದಿನಿ ಮತ್ತಿ ಜಶ್ವಂತ್ (Jashwanth Bopanna) ಎಂಟ್ರಿ ಪಡೆಯುತ್ತಾರೋ ಇಲ್ಲವೋ ಎಂಬ ಕೌತುಕ ಮನೆ ಮಾಡಿದೆ.
Published on: Sep 08, 2022 04:05 PM