Nanjangud Rathotsava 2024: ನಂಜನಗೂಡು ದೊಡ್ಡ ಜಾತ್ರೆಯ ಮಹಾರಥೋತ್ಸವದಲ್ಲಿ ರಾರಾಜಿಸಿದ RCB ಬಾವುಟ
ನಂಜನಗೂಡು ದೊಡ್ಡ ಜಾತ್ರೆಯ ಮಹಾರಥೋತ್ಸವದಲ್ಲಿ RCB ಬಾವುಟ ರಾರಾಜಿಸಿದೆ. ನಂಜನಗೂಡಿನಲ್ಲಿ ಇಂದು ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿದ್ದು ಆರ್ಸಿಬಿ ಅಭಿಮಾನಿಗಳು ಬಾವುಟ ಪ್ರದರ್ಶಿನಿ ಈ ಬಾರಿಯ ಗೆಲುವಿಗೆ ಪ್ರಾರ್ಥಿಸಿದ್ದಾರೆ. ಇಂದಿನಿಂದ ಐಪಿಎಲ್ ಪಂದ್ಯ ಆರಂಭವಾಗಿದ್ದು ಈ ಸಲನಾದ್ರು ಆರ್ಸಿಬಿ ಕಪ್ ಗೆಲ್ಲಲಿ ಎಂದು ಪ್ರಾರ್ಥಿಸಿದ್ದಾರೆ.
ಮೈಸೂರು, ಮಾರ್ಚ್.22: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ನಂಜುಂಡೇಶ್ವರ ದೊಡ್ಡ ಜಾತ್ರಾ ಮಹೋತ್ಸವ (Nanjangud Rathotsava) ಶುರುವಾಗಿದೆ. 108 ಅಡಿ ಎತ್ತರದ ಗೌತಮ ಪಂಚ ಮಹಾರಥ ರಾಜ ಬೀದಿಯಲ್ಲಿ ಸಾಗಿದೆ. ಬೆಳಗ್ಗೆ 6.30 ರಿಂದ 6.50 ರ ಶುಭ ಮೀನ ಲಗ್ನದಲ್ಲಿ ಜರುಗಿದ ರಥೋತ್ಸವದಲ್ಲಿ ರಾಜ್ಯ, ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸಿ ರಾಥೋತ್ಸವಕ್ಕೆ ಸಾಕ್ಷಿಯಾದರು. ಇನ್ನು ನಂಜನಗೂಡು ದೊಡ್ಡ ಜಾತ್ರೆಯ ಮಹಾರಥೋತ್ಸವದಲ್ಲಿ RCB ಬಾವುಟ ರಾರಾಜಿಸಿದ್ದು ವಿಶೇಷವಾಗಿತ್ತು.
ಹೂವುಗಳು, ಬಣ್ಣ ಬಣ್ಣದ ಬಟ್ಟೆಯಿಂದ ಮದುವಣಗಿತ್ತಿಯಂತೆ ರಥ ಸಿಂಗಾರಗೊಂಡಿತ್ತು. ದೇವಾಲಯದ ಸುತ್ತ ರಾಜ ಬೀದಿಯಲ್ಲಿ ರಥ ಸಂಚರಿಸಿದ್ದು ರಥೋತ್ಸವದ ಕಣ್ತುಂಬಿಕೊಂಡ ಭಕ್ತರು ಪುನೀತರಾದರು. ಇನ್ನು ರಥೋತ್ಸವದಲ್ಲಿ ಐದು ರಥಗಳನ್ನು ಎಳೆಯುವುದು ದೊಡ್ಡ ಜಾತ್ರೆಯ ವಿಶೇಷ. ಇದನ್ನು ಗೌತಮ ಮಹರ್ಷಿಗಳು ಮೊದಲು ಎಳೆದಿದ್ದರು ಎನ್ನುವ ಐತಿಹ್ಯ ಇರುವ ಕಾರಣ ಈಗಲೂ ಈ ರಥಕ್ಕೆ ಗೌತಮ ಪಂಚ ರಥ ಎಂದೇ ಕರೆಯಲಾಗುತ್ತೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ