‘ನನ್ನಮ್ಮ ಸೂಪರ್ ಸ್ಟಾರ್’ ಜೋಡಿಗಳ ಜತೆ ರ‍್ಯಾಪಿಡ್ ಫೈರ್; ಬಂತು ಚಿತ್ರವಿಚಿತ್ರ ಉತ್ತರ
ಆ್ಯಂಕರ್ ಸುಕನ್ಯಾ ಅವರು ನಾನಾ ರೀತಿಯ ರ‍್ಯಾಪಿಡ್ ಫೈರ್ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಮಕ್ಕಳು ಚಿತ್ರವಿಚಿತ್ರ ಉತ್ತರಗಳನ್ನು ನೀಡಿದರು.
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ನನ್ನಮ್ಮ ಸೂಪರ್ ಸ್ಟಾರ್’ (Nannamma Super Star) ಕಾರ್ಯಕ್ರಮಕ್ಕೆ ಇತ್ತೀಚೆಗಷ್ಟೇ ತೆರೆ ಬಿದ್ದಿದೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾದ ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ಅನೇಕ ಮಕ್ಕಳು ಮಿಂಚಿದರು. ತಾಯಿ-ಮಗಳಾದ ಯಶಸ್ವಿನಿ ಹಾಗೂ ವಂಶಿಕಾ (Vanshika) ಜೋಡಿ ಈ ರಿಯಾಲಿಟಿ ಶೋನಲ್ಲಿ ಟ್ರೋಫಿ ಗೆದ್ದಿತ್ತು. ಈ ಜೋಡಿ ಸೇರಿ ಫಿನಾಲೆಯಲ್ಲಿದ್ದ ಜೋಡಿಗಳು ಟಿವಿ9 ಕನ್ನಡ ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡಿದ್ದವು. ಈ ವೇಳೆ ಆ್ಯಂಕರ್ ಸುಕನ್ಯಾ (Achor Sukanya) ಅವರು ನಾನಾ ರೀತಿಯ ರ‍್ಯಾಪಿಡ್ ಫೈರ್ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಮಕ್ಕಳು ಚಿತ್ರವಿಚಿತ್ರ ಉತ್ತರಗಳನ್ನು ನೀಡಿದರು. ಒಟ್ಟಾರೆ, ಈ ರ‍್ಯಾಪಿಡ್ ಫೈರ್ ರೌಂಡ್ ಸಖತ್ ಮಜವಾಗಿತ್ತು. ಆ ವಿಡಿಯೋ ಇಲ್ಲಿದೆ.
ಇದನ್ನೂ ಓದಿ:‘ನನ್ನಮ್ಮ ಸೂಪರ್ ಸ್ಟಾರ್’ ವಿನ್ನರ್ ವಂಶಿಕಾ-ಯಶಸ್ವಿನಿ; ಟ್ರೋಫಿ ಜೊತೆ ಸಿಕ್ಕಿರುವ ಬಹುಮಾನದ ಹಣ ಎಷ್ಟು?
‘ಸಮನ್ವಿಗೆ ದೃಷ್ಟಿ ಬಿದ್ದಿತ್ತು ಅನಿಸುತ್ತೆ’; ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿಯ ಮಾತು
Published on: Apr 05, 2022 03:25 PM
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್ ಅಶೋಕ್
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್ಗೆ ಸೂಚನೆ

