ಗದಗದಲ್ಲಿ ಮುಂದುವರಿದ ಮಹಿಳಾ ಕಬಡ್ಡಿ; ಪುರುಷರು ಫಿದಾ! ವಿಡಿಯೋ ಇಲ್ಲಿದೆ

| Updated By: ಗಣಪತಿ ಶರ್ಮ

Updated on: May 27, 2024 | 12:14 PM

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಬಡ್ಡಿ ಟ್ರೆಂಡ್ ಹವಾ ಎಬ್ಬಿಸಿದೆ. ಇದೀಗ ಗದಗ ತಾಲೂಕಿನ ನೀರಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಸಮುದ್ರದಲ್ಲಿ ಗ್ರಾಮೀಣ ಮಹಿಳೆಯರು ಸೀರೆಯುಟ್ಟುಕೊಂಡೇ ಪುರುಷರೂ ನಾಚಿಸುವಂತೆ ಕಬಡ್ಡಿ ಆಡಿದ್ದಾರೆ.

ಗದಗ, ಮೇ 27: ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ನರೇಗಾ (Narega) ಯೋಜನೆ ಅಡಿ ಬದು ನಿರ್ಮಾಣ ಕಾರ್ಯಕ್ಕೆ ಬಂದ ಮಹಿಳೆಯರು ಕಬಡ್ಡಿ (Kabaddi) ಆಟ ಆಡಿ ಗಮನ ಸೆಳೆದ ವಿಡಿಯೋ ಒಂದು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಸೀರೆಯುಟ್ಟುಕೊಂಡೇ ಮಹಿಳೆಯರಾಡಿದ ಕಬಡ್ಡಿ ರಾಜ್ಯದ ಜನರ ಗಮನ ಸೆಳೆದಿತ್ತು. ಇದೀಗ ಗದಗ ಮಹಿಳೆಯರ ಕಬಡ್ಡಿ ಟ್ರೆಂಡ್ ಮುಂದುವರಿದಿದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಬಡ್ಡಿ ಟ್ರೆಂಡ್ ಹವಾ ಎಬ್ಬಿಸಿದೆ. ಇದೀಗ ಗದಗ ತಾಲೂಕಿನ ನೀರಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಸಮುದ್ರದಲ್ಲಿ ಗ್ರಾಮೀಣ ಮಹಿಳೆಯರು ಸೀರೆಯುಟ್ಟುಕೊಂಡೇ ಪುರುಷರೂ ನಾಚಿಸುವಂತೆ ಕಬಡ್ಡಿ ಆಡಿದ್ದಾರೆ.

ಇದನ್ನೂ ಓದಿ: ಸೀರೆಯುಟ್ಟು ಕಬಡ್ಡಿ ಆಡಿದ ಮಹಿಳೆಯರು

ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಡೆದ ಹೊಲಗಳಿಗೆ ಬದು ನಿರ್ಮಾಣ ಕಾಮಗಾರಿಗೆಂದು ಮಹಿಳೆಯರು ಬಂದಿದ್ದರು. ಬಿಡುವಿನ ವೇಳೆಯಲ್ಲಿ ಮಹಿಳಾ ಫಲಾನುಭವಿಗಳ ಭರ್ಜರಿ ಕಬಡ್ಡಿ ಆಡಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಪುರುಷರೇ ಮಹಿಳಾ ಕಬಡ್ಡಿಗೆ ಪ್ರೇಕ್ಷಕರಾಗಿದ್ದಾರೆ. ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:02 am, Mon, 27 May 24

Follow us on