ಅಮೆರಿಕದಲ್ಲಿದ್ರೂ ಸಂಸ್ಕೃತಿ ಮರೆಯದ ಪ್ರತಿಮಾ, ನಾಸಾ ತರಬೇತಿ ಅಭ್ಯರ್ಥಿಯ ಫೋಟೋಗೆ ನೆಟ್ಟಿಗರು ಫಿದಾ
ವಿಜ್ಞಾನ ಮತ್ತು ನಂಬಿಕೆ ಮಧ್ಯೆ ಆಗಾಗ್ಗೆ ಕಾವೇರಿದ ಚರ್ಚೆ ನಡೀತಾನೆ ಇರುತ್ತೆ. ಈಗ ಅಂತ ಮತ್ತೊಂದು ಚರ್ಚೆಯನ್ನ ಹುಟ್ಟುಹಾಕಿದೆ ನಾಸಾ ಇಂಟರ್ನಿ ಪ್ರತಿಮಾರಾಯ್ ಫೊಟೋ. ಅಮೆರಿಕದ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ ನಾಸಾ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ ತನ್ನ ಇಂಟರ್ನಿಗಳ ಫೊಟೋಗೆ ಭಾರತೀಯರು ಬಹುಪರಾಕ್ ಹಾಕ್ತಿದ್ದಾರೆ.
ನಾಸಾ ತರಬೇತಿಗೆ ಅಯ್ಕೆಯಾಗಿರೋ ಅಭ್ಯರ್ಥಿ ಪ್ರತಿಮಾ ರಾಯ್ ತಮ್ಮ ಲ್ಯಾಪ್ಟಾಪ್ ಸುತ್ತ ಲಕ್ಷ್ಮಿ, ಸರಸ್ವತಿ ಸೇರಿದಂತೆ ಹಲವು ದೇವರ ಫೋಟೋ, ವಿಗ್ರಹಗಳನ್ನು ಇಟ್ಟುಕೊಂಡಿರುವ ಫೋಟೋ ಈಗ ಬಹಳ ಮೆಚ್ಚುಗೆಗೆ ಕಾರಣವಾಗಿದೆ. ಈ ಫೋಟೋವನ್ನು ಸ್ವತಃ ನಾಸಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ವಿವಿಧತೆಯಲ್ಲೂ ಏಕತೆ ಕಾಪಾಡಿಕೊಳ್ಳುವಲ್ಲಿ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದೆ.
ಇನ್ನು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹಾಗೂ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ಮೂಲದ ಅಮೆರಿಕ ನಿವಾಸಿ ಪ್ರತಿಮಾ ರಾಯ್, ಅಮೆರಿಕದಲ್ಲಿದ್ರೂ ಸಂಸ್ಕೃತಿ ಮರೆದಿದ್ದಾರೆ. ಇದಕ್ಕೆ ಹಲವರು ಮೆಚ್ಚುಗೆ ಸೂಚಿಸ್ತಿದ್ದಾರೆ.
Latest Videos