ಆ ದುರ್ಘಟನೆ ನಡೆಯದೆ ಹೋಗಿದ್ದರೆ ನವೀನ್ ಶುಕ್ರವಾರ ಈ ವಿದ್ಯಾರ್ಥಿಗಳೊಂದಿಗೆ  ಸ್ವದೇಶಕ್ಕೆ ವಾಪಸ್ಸಾಗಿರುತ್ತಿದ್ದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 04, 2022 | 4:06 PM

ಖಾರ್ಕಿವ್ ನಲ್ಲಿ ಈಗ ಪರಿಸ್ಥಿತಿ ಬಹಳ ಕೆಟ್ಟದ್ದಾಗಿದೆ. ಇನ್ನೂ ನೂರಾರು ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ. ಗಡಿಭಾಗಕ್ಕೆ ಬರುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಟ್ರೈನ್ಗಳು ಓಡುತ್ತಿವೆಯಾದರೂ ಅವುಗಳಲ್ಲಿ ಭಾರತೀಯರನ್ನು ಹತ್ತಿಸಿಕೊಳ್ಳುತ್ತಿಲ್ಲ.

ನಮ್ಮ ಹಾವೇರಿ ಹುಡುಗ ನವೀನ್ ಶೇಖರಪ್ಪ ಗ್ಯಾನಗೌಡರ್ (Naveen Shekharappa Gyanagoudar) ಉಕ್ರೇನಲ್ಲಿ ಶೆಲ್ಲಿಂಗ್ ಗೆ (shelling) ಬಲಿಯಾಗಿ ಶುಕ್ರವಾರಕ್ಕೆ 4 ದಿನಗಳಾದವು. ಆ ದುರದೃಷ್ಟಕರ ದಿನದಂದು ನವೀನ್ ಸಾಮಾನು ತರಲೆಂದು ಮಾಲ್ ಒಂದಕ್ಕೆ ಹೋಗಿರದಿದ್ದರೆ ಈ ವಿಡಿಯೋನಲ್ಲಿ ಕಾಣುತ್ತಿರುವ ವಿದ್ಯಾರ್ಥಿಗಳೊಂದಿಗೆ ಇವತ್ತು (ಶುಕ್ರವಾರ) ಭಾರತಕ್ಕೆ ಬಂದಿರುತ್ತಿದ್ದರು. ಶುಕ್ರವಾರ ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Indira Gandhi International Airport) ಬಂದಿಳಿದ ಭಾರತೀಯ ವಿದ್ಯಾರ್ಥಿಗಳಲ್ಲಿ ಕೆಲವರು ಕನ್ನಡಿಗರಿದ್ದರು. ಸಾವಿನ ದವಡೆಯಿಂದ ಪಾರಾಗಿ ಬಂದ ಕರ್ನಾಟಕದ ವಿದ್ಯಾರ್ಥಿಗಳನ್ನು ಟಿವಿ9 ದೆಹಲಿ ವರದಿಗಾರ ಮಾತಾಡಿಸಿದರು.

ವರದಿಗಾರರೊಂದಿಗೆ ಮಾತಾಡುತ್ತಿರುವ ವಿದ್ಯಾರ್ಥಿನಿ ನವೀನ್ ತನ್ನ ಸಹಪಾಠಿ ಮತ್ತು ಫ್ರೆಂಡ್ ಆಗಿದ್ದರು ಅಂತ ಹೇಳುತ್ತಾರೆ. ಇವರಿಗೆ ಅಂದು ಏನು ನಡೆಯಿತು ಅನ್ನುವುದರ ಬಗ್ಗೆ ಸ್ವಲ್ಪ ಮಾಹಿತಿ ಇದೆ. ನವೀನ್ ತಿನ್ನೋದಿಕ್ಕೆ ಏನಾದರೂ ತಂದುಕೊಳ್ಳೋಣ ಅಂತ ಸೂಪರ್ ಮಾರ್ಕೆಟ್ ಗೆ ಹೋಗಿದ್ದರಂತೆ. ಅದೇ ಸಮಯದಲ್ಲಿ ಅವರ ಕತ್ತಿಗೆ ಗುಂಡು ತಗುಲಿ ಅವರು ಪ್ರಾಣಬಿಟ್ಟರು ಎಂದು ವಿದ್ಯಾರ್ಥಿನಿ ಹೇಳುತ್ತಾರೆ.

ಖಾರ್ಕಿವ್ ನಲ್ಲಿ ಈಗ ಪರಿಸ್ಥಿತಿ ಬಹಳ ಕೆಟ್ಟದ್ದಾಗಿದೆ. ಇನ್ನೂ ನೂರಾರು ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ. ಗಡಿಭಾಗಕ್ಕೆ ಬರುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಟ್ರೈನ್ಗಳು ಓಡುತ್ತಿವೆಯಾದರೂ ಅವುಗಳಲ್ಲಿ ಭಾರತೀಯರನ್ನು ಹತ್ತಿಸಿಕೊಳ್ಳುತ್ತಿಲ್ಲ. ಉಕ್ರೇನಿನ ಜನ ಸಹ ಪ್ರಾಣರಕ್ಷಣೆಗಾಗಿ ಪಲಾಯನ ಮಾಡುತ್ತಿದ್ದಾರೆ. ಹಾಗಾಗಿ, ರೈಲುಗಳಲ್ಲಿ ಸ್ವಾಭಾವಿಕವಾಗಿ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ ಮತ್ತು ಭಾರತೀಯರು ಬೇರೆ ಪ್ರದೇಶಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಿದ್ಯಾರ್ಥಿನಿ ಹೇಳುತ್ತಾರೆ.

ರಷ್ಯನ್ ಸೇನೆ ಕೆಲ ಗಂಟೆಗಳ ಕಾಲ ಸೇನಾ ಕಾರ್ಯಾಚರಣೆ ನಿಲ್ಲಿಸಿದರೆ ಭಾರತೀಯರು ಖಾರ್ಕಿವ್ ನಿಂದ ಆಚೆ ಬರಲು ಸಾಧ್ಯವಾಗುತ್ತದೆ. ಸತತವಾಗಿ ಬಾಂಬ್ ಮತ್ತು ಗುಂಡಿನ ದಾಳಿ ನಡೆಯುತ್ತಿರುವುದರಿಂದ ತಾವು ಅವಿತುಕೊಂಡಿರುವ ಸ್ಥಳಗಳಿಂದ ಅವರಿಗೆ ಹೊರ ಬರಲಾಗುತ್ತಿಲ್ಲ ಎಂದು ವಿದ್ಯಾರ್ಥಿನಿ ಹೇಳುತ್ತಾರೆ.

ಇದನ್ನೂ ಓದಿ:   Zaporizhzhia NPP: ರಷ್ಯಾ ದಾಳಿಯಿಂದ ಜಪೋರಿಝಿಯಾ ಪರಮಾಣು ಸ್ಥಾವರಕ್ಕೆ ಬೆಂಕಿ; ಸ್ಫೋಟಗೊಂಡರೆ ಸಂಪೂರ್ಣ ಯುರೋಪ್​ಗೆ ಅಪಾಯ