ಪೊಲೀಸ್ ಠಾಣೆಯಿಂದಲೇ ಬೆದರಿಕೆ ವಾಯ್ಸ್ ನೋಟ್ ಕಳಿಸಿದ ನಯನಾ; ಇಲ್ಲಿದೆ ವೈರಲ್ ಆಡಿಯೋ
Nayana Audio Clip: ನಯನಾ ಅವರು ಪೊಲೀಸ್ ಠಾಣೆಯಲ್ಲೇ ಕುಳಿತು ಸೋಮಶೇಖರ್ಗೆ ಈ ರೀತಿಯ ಬೆದರಿಕೆ ಸಂದೇಶ ಕಳಿಸಿದ್ದಾರೆ. ಅದರ ಆಡಿಯೋ ಕ್ಲಿಪ್ ವೈರಲ್ ಆಗಿದೆ.
ಕಾಮಿಡಿ ನಟರಾದ ಸೋಮಶೇಖರ್ ಮತ್ತು ನಯನಾ (Nayana) ನಡುವೆ ಕಿರಿಕ್ ಆಗಿದೆ. ಹಣಕಾಸಿನ ಸಲುವಾಗಿ ವಾಗ್ವಾದ ನಡೆದಿದೆ. ಖಾಸಗಿ ಮನರಂಜನಾ ಕಾರ್ಯಕ್ರಮದಲ್ಲಿ ಗೆದ್ದ ಬಹುಮಾನದ ಮೊತ್ತವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಈ ವೈಮನಸ್ಸು ಮೂಡಿದೆ. ಅದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ ಕೂಡ. ನಯನಾ ಅವರು ಪೊಲೀಸ್ ಠಾಣೆಯಲ್ಲೇ ಕುಳಿತು ಸೋಮಶೇಖರ್ಗೆ ಈ ರೀತಿಯ ಬೆದರಿಕೆ (Threat) ಸಂದೇಶ ಕಳಿಸಿದ್ದಾರೆ. ಅದರ ಆಡಿಯೋ ಕ್ಲಿಪ್ ವೈರಲ್ ಆಗಿದೆ. ‘ನಾವು ಏನು ಮಾಡೋದಕ್ಕೂ ಹೇಸಲ್ಲ’ ಎಂದು ಅವರು ಹೇಳಿದ್ದಾರೆ. ಬೆದರಿಕೆ ಮತ್ತು ನಿಂದನೆಗೆ ಒಳಗಾದ ಸೋಮಶೇಖರ್ ಅವರು ದೂರು ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.