ಸುದೀಪ್ ನಿರ್ದೇಶನದಲ್ಲಿ ಶಿವಣ್ಣ ನಟನೆ; ಹೊಸ ಸಿನಿಮಾ ಬಗ್ಗೆ ವೇದಿಕೆ ಮೇಲೆ ‘ಹ್ಯಾಟ್ರಿಕ್ ಹೀರೋ’ ಮಾತು
Kichcha Sudeep: ‘ಈಗತಾನೇ ಸುದೀಪ್ ಒಂದು ಕಥೆ ಹೇಳಿದರು. ಅದರ ಕಾನ್ಸೆಪ್ಟ್ ಚೆನ್ನಾಗಿದೆ. ಸುದೀಪ್ ಅವರೇ ನಿರ್ದೇಶನ ಮಾಡಿದರೆ ನಾನು ನಟಿಸುತ್ತೇನೆ. ಅದೇ ಉತ್ತಮ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ನಟನಾಗಿ ಮಾತ್ರವಲ್ಲದೇ ನಿರ್ದೇಶಕ ಮತ್ತು ನಿರ್ಮಾಪಕನಾಗಿಯೂ ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ. ಅವರ ನಿರ್ದೇಶನದ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ಅವರು ಶಿವರಾಜ್ಕುಮಾರ್ (Shivarajkumar) ನಟನೆಯ ಒಂದು ಚಿತ್ರಕ್ಕೆ ನಿರ್ದೇಶನ ಮಾಡುವ ಬಗ್ಗೆ ಮಾತು ಕೇಳಿಬಂದಿದೆ. ಹ್ಯಾಟ್ರಿಕ್ ಹೀರೋ ಅಭಿನಯದ ‘ನೀ ಸಿಗೋವರೆಗೂ’ (Nee Sigovaregu) ಸಿನಿಮಾಗೆ ಮಂಗಳವಾರ (ಆ.17) ಮುಹೂರ್ತ ನೆರವೇರಿತು. ಈ ವೇಳೆ ಸುದ್ದಿಗೋಷ್ಠಿಯ ವೇದಿಕೆಯಲ್ಲೇ ಶಿವರಾಜ್ಕುಮಾರ್ ಅವರು ಹೊಸ ವಿಚಾರ ಬಿಚ್ಚಿಟ್ಟರು.
‘ಈಗತಾನೇ ಸುದೀಪ್ ಒಂದು ಕಥೆ ಹೇಳಿದರು. ಅದರ ಕಾನ್ಸೆಪ್ಟ್ ಚೆನ್ನಾಗಿದೆ. ಇಷ್ಟೆಲ್ಲ ಆಫರ್ಗಳು ಬರುತ್ತಿರುವಾಗ ನಾನು ಸಿನಿಮಾ ಮಾಡದೇ ಇರಲು ಸಾಧ್ಯವೇ? ಆ ಕಥೆಯನ್ನು ಸುದೀಪ್ ಅವರೇ ನಿರ್ದೇಶನ ಮಾಡಿದರೆ ನಾನು ನಟಿಸುತ್ತೇನೆ. ಅದೇ ಉತ್ತಮ. ಹಾಗಾಗಿ ಸಾರ್ವಜನಿಕವಾಗಿ ಈ ಮಾತು ಹೇಳುತ್ತಿದ್ದೇನೆ’ ಎಂದಿದ್ದಾರೆ ಶಿವಣ್ಣ. ಈ ಸುದ್ದಿ ಕೇಳಿ ಸುದೀಪ್ ಮತ್ತು ಶಿವರಾಜ್ಕುಮಾರ್ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ:
ಶಿವರಾಜ್ಕುಮಾರ್ 124ನೇ ಚಿತ್ರಕ್ಕೆ ಅಪ್ಪಟ ಕನ್ನಡ ಶೀರ್ಷಿಕೆ ‘ನೀ ಸಿಗೋವರೆಗೂ’; ಮುಹೂರ್ತಕ್ಕೆ ಕಿಚ್ಚ ಅತಿಥಿ
Nee Sigovaregu: ಶಿವಣ್ಣನ ಹೊಸ ಚಿತ್ರ ‘ನೀ ಸಿಗೋವರೆಗೂ’ ಮುಹೂರ್ತ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ