ಕಲಬುರಗಿ: ಪರೀಕ್ಷಾ ಕೇಂದ್ರದಲ್ಲೇ ಶಾಸ್ತ್ರೋಕ್ತವಾಗಿ ವಿದ್ಯಾರ್ಥಿಗೆ ಮತ್ತೆ ಜನಿವಾರ ಧಾರಣೆ

Edited By:

Updated on: May 04, 2025 | 8:28 PM

ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದ NEET ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಅವರ ಜನಿವಾರ ತೆಗೆಸಲಾಗಿದೆ. ಪರೀಕ್ಷಾ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಶ್ರೀಪಾದ್ ಪಾಟೀಲ್ ಜನಿವಾರ ತೆಗೆದು ಪರೀಕ್ಷೆ ಹೊರ ಬರುತ್ತಿದ್ದಾನೆ. ಆಗ ಕೆಲ ಅಚರ್ಕರು ಮತ್ತು ಆತನ ಪೋಷಕರು ಪರೀಕ್ಷಾ ಕೇಂದ್ರದಲ್ಲೇ ಶ್ರೀಪಾದ್​ ಪಾಟೀಲ್​ಗೆ ಮತ್ತೆ ಜನಿವಾರ ಧಾರಣೆ ಮಾಡಿದ್ದಾರೆ.

ಕಲಬುರಗಿ, ಮೇ 04: ನೀಟ್ ಪರೀಕ್ಷೆಯಲ್ಲೂ ಅಧಿಕಾರಿಗಳು ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದಾರೆ. ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದ ನೀಟ್​ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್‌ ಅವರ ಜನಿವಾರವನ್ನು ಅಧಿಕಾರಿಗಳು ತೆಗೆಸಿ, ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ವಿದ್ಯಾರ್ಥಿ ಶ್ರೀಪಾದ್ ಪಾಟೀಲ್‌ ಪರೀಕ್ಷೆ ಬರೆದು ಹೊರ ಬರುತ್ತಿದ್ದಂತೆ ಆತನ ಪೋಷಕರು ಮತ್ತು ಕೆಲ ಮುಖಂಡರು ಆತನನ್ನು ಪರೀಕ್ಷಾ ಕೇಂದ್ರದಲ್ಲಿ ಕೂರಿಸಿ ಶಾಸ್ತ್ರೋಕ್ತವಾಗಿ ಮತ್ತೆ ಜನಿವಾರ ಧಾರಣೆ ಮಾಡಿದ್ದಾರೆ.