ನಾವು ಯಾವ ರಾಜ್ಯಕ್ಕೂ ಹಣ ನೀಡಲ್ಲ, ಅವರು ನಮ್ಮನ್ನು ಕೇಳೋದೂ ಇಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ

ಅರುಣ್​ ಕುಮಾರ್​ ಬೆಳ್ಳಿ

Updated on: Oct 13, 2023 | 2:31 PM

ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಲ್ ರಿಲೀಸ್ ಮಾಡಲು 40 ಪರ್ಸೆಂಟ್ ಕಮೀಶನ್ ಕೇಳಲಾಗುತ್ತದೆ ಎಂದು ಆರೋಪಿಸಿದ ಅಂಬಿಕಾಪತಿಯ ಫ್ಲ್ಯಾಟ್ ನಲ್ಲಿ ಹಣ ಸಿಕ್ಕಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ವಿಧಾನ ಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹಣ ಕಳಿಸಲು ಕಾಂಗ್ರೆಸ್ ಸರ್ಕಾರ ಕಂಟ್ರ್ಯಾಕ್ಟರ್ ಬಳಿ ಹಣ ಕೂಡಿಟ್ಟಿತ್ತು ಎಂದು ವಿರೋಧಪಕ್ಷಗಳಳು ಆರೋಪಿಸುತ್ತಿವೆ.

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್ ಅಂಬಿಕಾಪತಿಗೆ (R Ambikapathy) ಸೇರಿದ ಫ್ಲ್ಯಾಟೊಂದರಲ್ಲಿ ಐಟಿ ದಾಳಿಯ (IT raids) ವೇಳೆ ಸಿಕ್ಕಿರುವ ರೂ. 42 ಕೋಟಿ ರಾಜಕೀಯ ಬಣ್ಣ ಪಡೆದುಕೊಂಡಿದೆ. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಲ್ ರಿಲೀಸ್ ಮಾಡಲು 40 ಪರ್ಸೆಂಟ್ ಕಮೀಶನ್ ಕೇಳಲಾಗುತ್ತದೆ ಎಂದು ಆರೋಪಿಸಿದ ಅಂಬಿಕಾಪತಿಯ ಫ್ಲ್ಯಾಟ್ ನಲ್ಲಿ ಹಣ ಸಿಕ್ಕಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ವಿಧಾನ ಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹಣ ಕಳಿಸಲು ಕಾಂಗ್ರೆಸ್ ಸರ್ಕಾರ ಕಂಟ್ರ್ಯಾಕ್ಟರ್ ಬಳಿ ಹಣ ಕೂಡಿಟ್ಟಿತ್ತು ಎಂದು ವಿರೋಧಪಕ್ಷಗಳಳು ಆರೋಪಿಸುತ್ತಿವೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಬಿಜೆಪಿ ಮಾಡುತ್ತಿರುವ ಆರೋಪದ ಬಗ್ಗೆ ಕೇಳಿದಾಗ ಸಿಡಿಮಿಡಿಗೊಂಡರು. ಬೇರೆ ರಾಜ್ಯಗಳು ನಮ್ಮಿಂದ ಹಣ ಕೇಳಲ್ಲ ಮತ್ತು ನಾವು ಯಾವ ರಾಜ್ಯಕ್ಕೂ ಹಣ ಕೊಡಲ್ಲ ಎಂದು ಅವರು ಹೇಳಿದರು. ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು ಮತ್ತು ಆಧಾರರಹಿತ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.