ರಾಜ್ಯದಲ್ಲಿ ನಡೆಯುವ ಕಾಮಗಾರಿಗಳಿಗೆ 40%, ಬಿಬಿಎಂಪಿಯಲ್ಲಿ 50% ಕಮಿಷನ್ ನೀಡಬೇಕು; 6 ಗುತ್ತಿಗೆದಾರರ ಆತ್ಮಹತ್ಯೆಯಾಗಿದೆ -ಅಂಬಿಕಾಪತಿ
ಬೆಂಗಳೂರು ನಗರ ವ್ಯಾಪ್ತಿಯ ಪ್ರತಿಯೊಬ್ಬ ಶಾಸಕ, ಸಚಿವರು, ಅಧಿಕಾರಿಗಳಿಗೆ ಕಡ್ಡಾಯವಾಗಿ ಪರ್ಸೆಂಟೇಜ್ ನೀಡಲೇಬೇಕು. ಶೇಕಡಾ 50ರಷ್ಟು ಕಮಿಷನ್ ನೀಡಿದರಷ್ಟೇ ಬಿಲ್‌ಗಳು ಆಗುತ್ತೆ. ಕಮಿಷನ್ ನೀಡದಿದ್ರೆ ಬಿಲ್ ಆಗಲ್ಲವೆಂದು BBMP ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು: ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬಳಿಕ ಸರ್ಕಾರದಲ್ಲಿನ 40% ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ಧ್ವನಿ ಎತ್ತಿದ್ದಾರೆ. ರಾಜ್ಯದಲ್ಲಿ ನಡೆಯುವ ಕಾಮಗಾರಿಗಳಿಗೆ 40% ಕಮಿಷನ್ ನೀಡಬೇಕು. ಹಾಗೂ ಬಿಬಿಎಂಪಿಯಲ್ಲಿ ನಡೆಯುವ ಕಾಮಗಾರಿಗೆ 50% ಕಮಿಷನ್ ನೀಡಬೇಕು ಎಂದು ಅಂಬಿಕಾಪತಿ ಆರೋಪಿಸಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯ ಪ್ರತಿಯೊಬ್ಬ ಶಾಸಕ, ಸಚಿವರು, ಅಧಿಕಾರಿಗಳಿಗೆ ಕಡ್ಡಾಯವಾಗಿ ಪರ್ಸೆಂಟೇಜ್ ನೀಡಲೇಬೇಕು. ಶೇಕಡಾ 50ರಷ್ಟು ಕಮಿಷನ್ ನೀಡಿದರಷ್ಟೇ ಬಿಲ್‌ಗಳು ಆಗುತ್ತೆ. ಕಮಿಷನ್ ನೀಡದಿದ್ರೆ ಬಿಲ್ ಆಗಲ್ಲವೆಂದು BBMP ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ಪರ್ಸೆಂಟೇಜ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ತನಿಖೆ ಮಾಡಿದರೆ ಸೂಕ್ತ ದಾಖಲೆ ನೀಡಲು ನಾನು ಸಿದ್ಧ. ಪೊಲೀಸ್ ಆಯುಕ್ತರಿಗೆ ಎಲ್ಲಾ ದಾಖಲೆಗಳನ್ನು ನೀಡುತ್ತೇನೆ. KS ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆಗೂ ಮುನ್ನ 6 ಗುತ್ತಿಗೆದಾರರ ಆತ್ಮಹತ್ಯೆಯಾಗಿದೆ. BBMP ಸಿವಿಲ್ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಟಿವಿ9ಗೆ ಅಂಬಿಕಾಪತಿ ತಿಳಿಸಿದ್ದಾರೆ.
ಬಿಬಿಎಂಪಿಯಲ್ಲಿ 50 ಪರ್ಸೆಂಟೇಜ್ ಕಮಿಷನ್ ದಂಧೆ ಇದೆ ಬಿಬಿಎಂಪಿಯಲ್ಲಿ 50 ಪರ್ಸೆಂಟೇಜ್ ಕಮಿಷನ್ ದಂಧೆ ಇದೆ. 50 ಪರ್ಸೆಂಟೇಜ್ ಕಮಿಷನ್ ಕೊಟ್ಟು, ಕ್ವಾಲಿಟಿ ವರ್ಕ್ ಮಾಡಲು ಆಗಲ್ಲ. ಬೆಂಗಳೂರಿನಲ್ಲಿ ಕಳಪೆ ಕಾಮಗಾರಿಗೆ 50 ಪರ್ಸೆಂಟೇಜ್ ಕಾರಣ. ಸಾರ್ವಜನಿಕರು ಕಳಪೆ ಕಾಮಗಾರಿಗೆ ಬಗ್ಗೆ ಟೀಕೆ ಮಾಡುತ್ತಾರೆ. ಆದರೆ ಕಮಿಷನ್ ದಂಧೆಯ ಬಗ್ಗೆ ಯಾರೂ ಕೇಳೋದಿಲ್ಲ. ಪೊಲೀಸರು ತನಿಖೆ ನಡೆಸೋದಾದರೆ 50 ಪರ್ಸೆಂಟೇಜ್ ಬಗ್ಗೆ ಮಾಹಿತಿ ನೀಡುವುದಕ್ಕೆ ನಾನು ಸಿದ್ಧ ಎಂದರು.
ಇದನ್ನೂ ಓದಿ: ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಸಾವು ಪ್ರಕರಣ: ಈಶ್ವರಪ್ಪ ಆರೋಪಿ ನಂ 1, ಎಫ್ಐಆರ್ ದಾಖಲು