ನೆಲಮಂಗಲ: ರಾತ್ರೋರಾತ್ರಿ ವಾಲಿದ ಮೂರು ಅಂತಸ್ತಿನ ಕಟ್ಟಡ; ಮುಂದೇನಾಯ್ತು ನೋಡಿ

Updated on: Sep 29, 2025 | 9:32 AM

ನೆಲಮಂಗಲದ ಮಾದಾವಾರ ಗ್ರಾಮದಲ್ಲಿ ಎರಡು ವರ್ಷದ ಹಿಂದಷ್ಟೆ ನಿರ್ಮಿಸಿದ್ದ ಮೂರು ಅಂತಸ್ತಿನ ಕಟ್ಟಡ ರಾತ್ರೋರಾತ್ರಿ ವಾಲಿಕೊಂಡಿದೆ. ಬಿರುಕಿನಿಂದ ಕಟ್ಟಡ ವಾಲಿಕೊಂಡಿದ್ದು, ಸದ್ಯ ಸ್ಥಳೀಯರಿಲ್ಲಿ ಆತಂಕ ಶುರುವಾಗಿದೆ. ಬಾಡಿಗೆದಾರರು ಮನೆ ಖಾಲಿ ಮಾಡಿಕೊಂಡಿ ಹೋಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೆಲಮಂಗಲ, ಸೆಪ್ಟೆಂಬರ್​ 29: ಬಿರುಕಿನಿಂದ ರಾತ್ರೋರಾತ್ರಿ ಮೂರು ಅಂತಸ್ತಿನ ಕಟ್ಟಡ ವಾಲಿರುವಂತಹ ಘಟನೆ ನೆಲಮಂಗಲ ಬಳಿಯ ಮಾದಾವಾರ ಗ್ರಾಮದಲ್ಲಿ ನಡೆದಿದೆ. ಮಾದನಾಯಕನಹಳ್ಳಿಯ ಗಾರೆ ಸೀನಪ್ಪ ಎಂಬುವವರಿಗೆ ಸೇರಿದ್ದ ಕಟ್ಟಡ ವಾಲಿದೆ. ಎರಡು ವರ್ಷದ ಹಿಂದಷ್ಟೆ ಮನೆ ನಿರ್ಮಿಸಲಾಗಿದೆ. ಘಟನೆಯಿಂದಾಗಿ ಬಾಡಿಗೆದಾರರು ಖಾಲಿ ಮಾಡಿದ್ದಾರೆ. ಕಟ್ಟಡ ವಾಲಿದ್ದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.