AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತೊಂಭತ್ತು, ಹದಿನೆಂಟಾಗೋ ಸಮಯ; ಬಿಗ್ ಬಾಸ್​ನಲ್ಲಿ ಮೊದಲ ದಿನವೇ ರಕ್ಷಿತಾ ಶೆಟ್ಟಿ ಔಟ್?

ಹತ್ತೊಂಭತ್ತು, ಹದಿನೆಂಟಾಗೋ ಸಮಯ; ಬಿಗ್ ಬಾಸ್​ನಲ್ಲಿ ಮೊದಲ ದಿನವೇ ರಕ್ಷಿತಾ ಶೆಟ್ಟಿ ಔಟ್?

ರಾಜೇಶ್ ದುಗ್ಗುಮನೆ
|

Updated on: Sep 29, 2025 | 8:31 AM

Share

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸಾಕಷ್ಟು ಟ್ವಿಸ್ಟ್​ಗಳನ್ನು ನೀಡಲಾಗಿತ್ತು. ಇದು ಈ ಸೀಸನ್​ನಲ್ಲೂ ಮುಂದುವರಿದಿದೆ. ಮೊದಲ ದಿನವೇ ಎಲಿಮಿನೇಷನ್ ಭಯವನ್ನು ಬಿಗ್ ಬಾಸ್ ಹುಟ್ಟಿಸಿದ್ದಾರೆ. ಏಕ ನಿರ್ಧಾರದಿಂದ ಒಬ್ಬರನ್ನು ಮನೆಯಿಂದ ಕಳಿಸಲಾಗುತ್ತಾ ಇದೆ. ಆ ಬಗ್ಗೆ ಬಿಗ್ ಬಾಸ್ ಪ್ರೋಮೋ ಹಂಚಿಕೊಂಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಮೊದಲ ದಿನವೇ ಎಲಿಮಿನೇಷನ್ ಭಯ ಹುಟ್ಟಿದೆ. ಈ ಬಾರಿ 19 ಸ್ಪರ್ಧಿಗಳನ್ನು ಕಳುಹಿಸಲಾಗಿದೆ. ಇದು ಈಗ 18 ಆಗುವ ಸಮಯ ಮೊದಲ ದಿನವೇ ಬಂದು ಬಿಟ್ಟಿದೆ. ಸೂಕ್ತ ಕಾರಣ ನೀಡಿ ಒಬ್ಬರನ್ನು ಮನೆಯಿಂದ ಹೊರ ಹಾಕುವ ಸಮಯ ಬಂದಿದೆ. ಅನೇಕರು ರಕ್ಷಿತಾ ಹೆಸರು ನೀಡಿದ್ದಾರೆ. ಸ್ಪಂದನಾ, ರಕ್ಷಿತಾ ಮೊದಲಾದವರು ಲಿಸ್ಟ್​ನಲ್ಲಿ ಇದ್ದಾರೆ. ರಕ್ಷಿತಾ ಹೊರ ಹೋದರೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ಇದು ಸುಮ್ಮನೆ ಪ್ರ್ಯಾಂಕ್ ಇರಬಹುದು ಎಂದು ಭಾವಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.