ಇತಿಹಾಸ ನಿರ್ಮಿಸಿದ ನೇಪಾಳ: ಬಲಿಷ್ಠ ಪಡೆ ವಿರುದ್ಧ ಭರ್ಜರಿ ಜಯ
Nepal vs West Indies: ಸುಲಭ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅದರಲ್ಲೂ ಯಾವುದೇ ಬ್ಯಾಟರ್ 30 ರನ್ ಕಲೆಹಾಕಿಲ್ಲ ಎಂಬುದು ವಿಶೇಷ. ಪರಿಣಾಮ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 129 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ನೇಪಾಳ ತಂಡವು 19 ರನ್ಗಳ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದೆ.
ಟಿ20 ಕ್ರಿಕೆಟ್ನಲ್ಲಿ ನೇಪಾಳ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಅದು ಸಹ ಎರಡು ಬಾರಿಯ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಕ್ಕೆ ಸೋಲುಣಿಸುವ ಮೂಲಕ. ಇದರೊಂದಿಗೆ ನೇಪಾಳ ತಂಡವು ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ಚೊಚ್ಚಲ ಗೆಲುವು ದಾಖಲಿಸಿದಂತಾಗಿದೆ. ಅಂದರೆ ನೇಪಾಳ ತಂಡವು ಈವರೆಗೆ ಟೆಸ್ಟ್ ಆಡುವ ದೇಶದ ವಿರುದ್ಧ ಒಂದೇ ಒಂದು ಟಿ20 ಪಂದ್ಯ ಗೆದ್ದಿರಲಿಲ್ಲ. ಇದೀಗ ವಿಂಡೀಸ್ ಪಡೆಯನ್ನು ಮಕಾಡೆ ಮಲಗಿಸಿ ಐತಿಹಾಸಿಕ ಸಾಧನೆ ಮಾಡಿದೆ.
ಯುಎಇನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 148 ರನ್ ಕಲೆಹಾಕಿದ್ದರು.
149 ರನ್ಗಳ ಸುಲಭ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅದರಲ್ಲೂ ಯಾವುದೇ ಬ್ಯಾಟರ್ 30 ರನ್ ಕಲೆಹಾಕಿಲ್ಲ ಎಂಬುದು ವಿಶೇಷ. ಪರಿಣಾಮ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 129 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ನೇಪಾಳ ತಂಡವು 19 ರನ್ಗಳ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದೆ.
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕೈಲ್ ಮೇಯರ್ಸ್ , ಅಕೀಮ್ ಅಗಸ್ಟೆ , ಕೀಸಿ ಕಾರ್ಟಿ , ಅಮೀರ್ ಜಾಂಗೂ (ವಿಕೆಟ್ ಕೀಪರ್) , ಜ್ಯುವೆಲ್ ಆಂಡ್ರ್ಯೂ , ಜೇಸನ್ ಹೋಲ್ಡರ್ , ಫ್ಯಾಬಿಯನ್ ಅಲೆನ್ , ಅಕೇಲ್ ಹೊಸೇನ್ (ನಾಯಕ) , ನವೀನ್ ಬಿಡೈಸಿ , ಓಬೆಡ್ ಮೆಕಾಯ್ , ರಾಮನ್ ಸಿಮಂಡ್ಸ್.
ನೇಪಾಳ ಪ್ಲೇಯಿಂಗ್ 11: ಕುಶಾಲ್ ಭುರ್ಟೆಲ್ , ಆಸಿಫ್ ಶೇಖ್ (ವಿಕೆಟ್ ಕೀಪರ್) , ರೋಹಿತ್ ಪೌಡೆಲ್ (ನಾಯಕ) , ಸಂದೀಪ್ ಜೋರಾ , ದೀಪೇಂದ್ರ ಸಿಂಗ್ ಐರಿ , ಕುಶಾಲ್ ಮಲ್ಲಾ , ಕರಣ್ ಕೆಸಿ , ಗುಲ್ಸನ್ ಝಾ , ಸೋಂಪಾಲ್ ಕಾಮಿ , ನಂದನ್ ಯಾದವ್ , ಲಲಿತ್ ರಾಜಬಂಶಿ.

