Video: ಮೋದಿ ಜಾಕೆಟ್ ತೊಟ್ಟು ಪ್ರಧಾನಿ ಮೋದಿಗೆ ಸರ್ಪ್ರೈಸ್ ಕೊಟ್ಟ ಇಸ್ರೇಲ್ ಪ್ರಧಾನಿ ನೆತನ್ಯಾಹು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತೀಯ ಉಡುಗೆ ತೊಟ್ಟು ಪ್ರಧಾನಿ ನರೇಂದ್ರ ಮೋದಿಯವರನ್ನು ಅಚ್ಚರಿಗೊಳಿಸಿರುವ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಬುಧವಾರ ಹೋಗಿದ್ದು, ಇಂದು ಕೂಡ ಅಲ್ಲೇ ಇರಲಿದ್ದಾರೆ. ಇಸ್ರೇಲ್‌ಗೆ ಆಗಮಿಸಿದ ಮೋದಿ ಅವರು ವಿಮಾನ ಇಳಿದು ಬರುತ್ತಿದ್ದಂತೆ ನೆತನ್ಯಾಹು ನಗುನಗುತ್ತಾ ಕೈ ಹಿಡಿದು ಅಪ್ಪಿಕೊಂಡಿದ್ದರು. ಈ ಸಂದರ್ಭದಲ್ಲಿ ನೆತನ್ಯಾಹು ಪತ್ನಿ ಸಾರಾ ಅವರು ಜೊತೆಗಿದ್ದು ಮೋದಿ ಅವರನ್ನು ಸ್ವಾಗತಿಸಿದ್ದರು.
ಇಸ್ರೇಲ್, ಫೆಬ್ರವರಿ 26: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತೀಯ ಉಡುಗೆ ತೊಟ್ಟು ಪ್ರಧಾನಿ ನರೇಂದ್ರ ಮೋದಿಯವರನ್ನು ಅಚ್ಚರಿಗೊಳಿಸಿರುವ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಬುಧವಾರ ಹೋಗಿದ್ದು, ಇಂದು ಕೂಡ ಅಲ್ಲೇ ಇರಲಿದ್ದಾರೆ. ಇಸ್ರೇಲ್‌ಗೆ ಆಗಮಿಸಿದ ಮೋದಿ ಅವರು ವಿಮಾನ ಇಳಿದು ಬರುತ್ತಿದ್ದಂತೆ ನೆತನ್ಯಾಹು ನಗುನಗುತ್ತಾ ಕೈ ಹಿಡಿದು ಅಪ್ಪಿಕೊಂಡಿದ್ದರು. ಈ ಸಂದರ್ಭದಲ್ಲಿ ನೆತನ್ಯಾಹು ಪತ್ನಿ ಸಾರಾ ಅವರು ಜೊತೆಗಿದ್ದು ಮೋದಿ ಅವರನ್ನು ಸ್ವಾಗತಿಸಿದ್ದರು.
ಬುಧವಾರ ಜೆರುಸಲೇಂನಲ್ಲಿ ನಡೆದ ಜಂಟಿ ಭೋಜನಕೂಟಕ್ಕೂ ಮುನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸುವ ಮೂಲಕ ಪ್ರಧಾನಿ ಮೋದಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.ಇಸ್ರೇಲಿ ಪ್ರಧಾನಿ ಮೋದಿ ಜಾಕೆಟ್ ಎಂದೂ ಕರೆಯಲ್ಪಡುವ ಕಲ್ಲಿನ ಬಣ್ಣದ ನೆಹರೂ ಜಾಕೆಟ್ ಅನ್ನು ಆಯ್ಕೆ ಮಾಡಿಕೊಂಡಿದ್ದರು.
ಪ್ರಧಾನಿ ಮೋದಿ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು, ನಿಜಕ್ಕೂ ಅದ್ಭುತ, ಭಾರತೀಯ ಉಡುಪಿನ ಮೇಲಿನ ನಿಮ್ಮ ಒಲವು ನಮ್ಮ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲಿನ ನಿಮ್ಮ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಬರೆದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ

